ಹಸಿರ ಯೋಗಿ

Author : ಈರಣ್ಣ ಬೆಂಗಾಲಿ

Pages 148

₹ 150.00




Year of Publication: 2019
Published by: ಕೃಷ್ಣಾರುಣ ಪ್ರಕಾಶನ
Address: #5, ನೇತಾಜಿ ನಗರ, ರಾಯಚೂರು
Phone: 9986724198

Synopsys

ಪರಿಸರ ಪ್ರೇಮಿ ಈರಣ್ಣ ಕೋಸಗಿ ಅವರ ಜೀವನ ಚರಿತ್ರೆ, ಪರಿಸರ ಕಾಳಜಿ ಹುಟ್ಟಿಕೊಂಡ ಬಗೆ ಇವೆಲ್ಲದರ ಸಂಪೂರ್ಣ ಮಾಹಿತಿ ಹಸಿರು ಯೋಗಿಯಲ್ಲಿದೆ. ಸಾಲು ಮರದ ತಿಮ್ಮಕ್ಕ ಸಾಲು ಮರಗಳನ್ನೆಟ್ಟು, ಪೋಷಿಸಿ ಪರಿಸರ ಜಾಗೃತಿ ಮುಡಿಸಿದವರು. ಇದೇ ಸಾಲಿನಲ್ಲಿ ಈರಣ ಕೋಸಗಿ ಅವರ ಸಾಧನೆಯು ಸೇರಿದೆ. ಬಿಸಿಲೂರು ರಾಯಚೂರಿನವರಾದ ಈರಣ್ಣ ಕೋಸಗಿ ಅವರು ಜನರಲ್ಲಿ ಪರಿಸರ ಉಳಿಸಿ ಜಾಗೃತಿ ಮೂಡಿಸುವುದು ಮಾತ್ರವಲ್ಲದೇ ಸ್ವತಃ ತಾವೇ ಪರಿಸರ ಸಂರಕ್ಷಣೆ ಕಾಯಕದಲ್ಲಿ ತೊಡಗಿಕೊಂಡವರು. ವ್ಯಂಗ್ಯಚಿತ್ರಕಾರರಾದ ಈರಣ್ಣ ಬೆಂಗಾಲಿ ಅವರು ಕೋಸಗಿ ಅವರ ಸಂಪೂರ್ಣ ಪರಿಚಯ, ಪರಿಸರ ಜಾಗೃತಿ ಮುಡಿಸಿದ ಬಗೆ, ಅವರ ಪರಿಸರ ಪ್ರಜ್ಞೆಯನ್ನು ಸರಳವಾಗಿ ವಿವರಿಸಿದ್ದಾರೆ. 

About the Author

ಈರಣ್ಣ ಬೆಂಗಾಲಿ

ಈರಣ್ಣ ಬೆಂಗಾಲಿ ಅವರು ರಾಯಚೂರು ನಗರದವರು. ಫ್ರಿಲಾನ್ಸರ್ ಆಗಿದ್ದಾರೆ. ಗಜಲ್, ಕಥೆ, ಕವನ, ಲೇಖನ, ವಚನ, ಹನಿಗವನ, ಹೈಕು, ಮಕ್ಕಳ ಕಥೆ, ಮಕ್ಕಳ ಕವನ, ಜೀವನ ಚರಿತ್ರೆ ಹೀಗೆ ಸಾಹಿತ್ಯದ ಮುಂತಾದ ಪ್ರಕಾರಗಳಲ್ಲಿ ಕೃಷಿ ಮಾಡಿರುತ್ತಾರೆ. ಇದುವರೆಗೆ ಇವರ ಹದಿನೈದಕ್ಕೂ ಹೆಚ್ಚಿನ ಕೃತಿಗಳು ಪ್ರಕಟವಾಗಿವೆ. 'ಅರಿವಿನ ಅಂಬರ ಅಂಬೇಡ್ಕರ್' ಗಜಲ್ ಕೃತಿಗೆ 2020ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, 'ಅಪರೂಪದ ಕನ್ನಡ ಮೇಷ್ಟ್ರು' ಕೃತಿಗೆ 2021 ರಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ  ಸೇರಿದಂತೆ ಇವರ ಇನ್ನಿತರ ಕೃತಿಗಳಿಗೂ ಪ್ರಶಸ್ತಿ ಲಭಿಸಿವೆ. ಹಂಪಿ ಉತ್ಸವ, ...

READ MORE

Related Books