ನಾಟಕಕಾರ, ಸಾಹಿತಿ ದಾಶರಥಿ ದೀಕ್ಷಿತ್ ಅವರ ಜೀವನ ಮತ್ತು ಸಾಧನೆ ಕುರಿತು ಪರಿಚಯಿಸುವ ಪುಸ್ತಕ ಇದು. ದಾಶರಥಿ ದೀಕ್ಷಿತ್ ಅವರು ಹಾಸ್ಯ ಬರಹಗಾರರಾಗಿ ಮತ್ತು ನಾಟಕ ತರಬೇತಿ ಮಾಡುವುದರಲ್ಲಿಯೂ ಹೆಸರುವಾಸಿಯಾದವರು. ಭಾವಚಿತ್ರಗಳು, ವಂಶವೃಕ್ಷ, ಕೃತಿಗಳ ಪಟ್ಟಿ, ಬದುಕಿನ ಕೆಲವು ಮೈಲಿಗಲ್ಲುಗಳ ದಾಖಲೆಗಳನ್ನು ನೀಡಲಾಗಿದೆ.
ಲೋಕನಾಥ ದೀಕ್ಷಿತ್ ಖ್ಯಾತ ಹಾಸ್ಯ ಸಾಹಿತಿ ಡಾ. ದಾಶರಥಿ ದೀಕ್ಷಿತರ ಪುತ್ರ. ಚಿಕ್ಕಂದಿನಿಂದ ತಂದೆಯೊಡನೆ ನಾಟಕ, ಸಿನಿಮಾ, ರೇಡಿಯೋ, ಕಿರುತೆರೆ ಇವುಗಳಲ್ಲಿ ತೊಡಗಿಸಿಕೊಂಡವರು. ಲೋಕನಾಥ ದೀಕ್ಷಿತ್ ಸಹ ತಂದೆಯಂತೆ ಕಾದಂಬರಿ, ನಾಟಕ, ಹಾಸ್ಯ ಬರಹಗಳ ಸಂಕಲನ ಇವುಗಳನ್ನು ಕನ್ನಡ ಸಾಹಿತ್ಯಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ಇವರು ಮೂವತ್ತೈದು ವರ್ಷಗಳ ಕಾಲ 'ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್'ನಲ್ಲಿ ಎಂಜಿನಿಯರ್ ಆಗಿ ದುಡಿದು ನಿವೃತ್ತರಾಗಿದ್ದಾರೆ. ಈಗ ಕಥೆ, ಕಾದಂಬರಿ, ನಾಟಕ ರಚನೆ ಇವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ...
READ MORE