‘ಸ್ಟೀಫನ್ ಹಾಕಿಂಗ್’ ಸಿವಿಜಿ ಪಬ್ಲಿಕೇಷನ್ಸ್ ನ ಜೀವನ ಚರಿತ್ರೆ ಮಾಲೆಯಲ್ಲಿ ಪ್ರಕಟವಾದ ಕೃತಿ. ವಿಶ್ವಕಂಡ ಮಹಾಸಾಧಕ ಸ್ಟೀಫನ್ ಹಾಕಿಂಗ್ ಅವರ ಕುರಿತು ಕನ್ನಡ ಓದುಗರಿಗೆ ಮಾಹಿತಿ ನೀಡುವ ಸಲುವಾಗಿ ಈ ಕೃತಿಯನ್ನು ರಚಿಸಿದ್ದು ಲೇಖಕ ಬೆ.ಗೋ. ರಮೇಶ್. ಕೃತಿಯ ಬಗ್ಗೆ ಬರೆಯುತ್ತಾ ಸ್ಟೀಫನ್ ಹಾಕಿಂಗ್ ಜೀವನ-ಸಾಧನೆ ಕುರಿತು ನಾನು ಬರೆಯಬಲ್ಲೆ ಎಂದು ನಾನೆಂದೂ ತಿಳಿದಿರಲಿಲ್ಲ. ಅವರೊಬ್ಬ ಮಹಾನ್ ವಿಜ್ಞಾನಿ ಎನ್ನುತ್ತಾರೆ ಬೆ.ಗೋ.ರಮೇಶ್. ಅಸೀಮವಿಶ್ವದ ಸಿದ್ಧಾಂತ ಮಂಡಿಸಿದ ವಿಶ್ವವಿಜ್ಞಾನಿ ಕಾಸ್ಮಾಲಜಿಯ ನಿಸ್ಲಿಮ. ಅವರು ತಮಗಿದ್ದ ನ್ಯೂನತೆಯಲ್ಲೂ ಮಹಾನ್ ಸಾಧಕರಾಗಿ ಬಹುಸಂಖ್ಯೆಯಲ್ಲಿ ಮಾರಾಟವಾದ ಪುಸ್ತಕಗಳ ಲೇಖಕರೆಂದು ತಿಳಿದಾಗ ಅವರನ್ನು ಕುರಿತು ಬರೆಯಲು ಆಶಿಸಿದೆ ಎನ್ನುತ್ತಾರೆ.
ಹಾಕಿಂಗ್ ಇಂದು ಇಲ್ಲ ನಿಜ. ಆದರೆ ಭೌತಿಕವಾಗಿಯಷ್ಟೆ ಅವರೇ ಹೇಳಿದಂತೆ ವಿಶ್ವ ಇರುತ್ತದೆ ಎಂದಿರುವಲ್ಲಿ ಅವರ ನೆನಪು ಸದಾ ಅಮರ, ಅವರ ಕೆಲಸಗಳನ್ನು ತಿಳಿಯಲು ಸಂಶೋಧನಾ ವಿದ್ಯಾರ್ಥಿಗಳು ಇದ್ದೇ ಇರುತ್ತಾರೆ. ತಾತ್ವಿಕಭೌತ ಶಾಸ್ತ್ರಕ್ಕೆ ಅವರೊಬ್ಬ ಅಪಾರ ಕೊಡುಗೆ ನೀಡಿದ ವಿಜ್ಞಾನಿ.ಅವರ ಕುರಿತು ಮತ್ತಷ್ಟು ತಿಳಿಯುವ ಸಲುವಾಗಿ ಈ ಕೃತಿ ರಚಿತವಾಗಿದೆ.
ಬೆ.ಗೋ. ರಮೇಶ್ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಹನಸಗೆಯಲ್ಲಿ ಆಗಸ್ಟ್ 22 , 1945ರಲ್ಲಿ ಜನಿಸಿದರು. ತಂದೆ ಗೊವಿಂದರಾಜು, ತಾಯಿ ರಾಧಮ್ಮನವರು. ಅವರ ಪ್ರಾರಂಭಿಕ ಶಿಕ್ಷಣ ನಡೆದದ್ದು ಬೆಂಗಳೂರಿನ ಮಲ್ಲೇಶ್ವರಂ ಶಾಲೆಯಲ್ಲಿ. ಇಂಟರ್‌ಮೀಡಿಯೆಟ್ ಓದಿದ್ದು ಸರಕಾರಿ ಕಾಲೇಜಿನಲ್ಲಿ. ಮುಂದೆ ರಮೇಶರು ಹಾಸನದ ಮಲ್ನಾಡ್ ಎಂಜನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಪಡೆದರು. ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಉದ್ಯೋಗ ನಿರ್ವಹಿಸಿದ ಬೆ. ಗೋ ರಮೇಶರು ಕರ್ನಾಟಕ ಪವರ್ ಕಾರ್ಪೋರೇಷನ್ನಿನಲ್ಲಿ ಸಹಾಯಕ ಎಂಜನಿಯರಾಗಿ, ಸಹಾಯಕ ಎಕ್ಸುಕ್ಯುಟಿವ್ ಎಂಜನಿಯರಾಗಿ, ಎಕ್ಸಿಕ್ಯುಟಿವ್ ಎಂಜನಿಯರಾಗಿ, ರಾಯಚೂರಿನ ಶಾಕೋತ್ಪನ್ನ ವಿದ್ಯುದಾಗಾರದಲ್ಲಿ ಸೇವೆ ಸಲ್ಲಿಸಿ ...
READ MORE