ವೀಣೆ ರಾಜಾರಾಯರು

Author : ಪೂರ್ಣಿಮಾ ಆರ್.

Pages 80

₹ 60.00




Year of Publication: 2015
Published by: ಉದಯಭಾನು ಕಲಾಸಂಘ
Address: ಉದಯಭಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು- 560019
Phone: (080-26609343 / 26601831)

Synopsys

ಕರ್ನಾಟಕ ಸಂಗೀತದ ಶ್ರೇಷ್ಠ ಕಲಾ ಪರಂಪರೆಗೆ ಸೇರಿದ ವೀಣೆ ರಾಜಾರಾಯರು ಸಂಗೀತ ಗಾಯನದಲ್ಲೂ ಪ್ರಖ್ಯಾತರಾಗಿ,  ದೇಶದಾದ್ಯಂತ ಸಾವಿರಾರು ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟವರು.  ಕನ್ನಡದಲ್ಲಿ ಸಂಗೀತ ಶಾಸ್ತ್ರಗ್ರಂಥಗಳ ಕೊರತೆ ಇರುವುದನ್ನು ಅರಿತ ರಾಜಾರಾಯರು ‘ಸಂಗೀತ ಶಾಸ್ತ್ರ ಸಾರ’ ಮತ್ತು ‘ಸಂಗೀತ ಚಂದ್ರಿಕೆ’ ಎಂಬ ಎರಡು ಮಹತ್ವಪೂರ್ಣ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದರು. ಇದಲ್ಲದೆ ‘ಭಾರತೀಯ ಸಂಗೀತ ವಾದ್ಯಗಳು’ ಎಂಬ ಮಹತ್ವಪೂರ್ಣ ಕೃತಿಯನ್ನು ಕೂಡಾ ರಚಿಸಿದರು. ಈ ಎಲ್ಲ ಕೊಡುಗೆಗಳು ಸಂಗೀತ ಲೋಕದಲ್ಲಿ ಕನ್ನಡಕ್ಕೆ ಸಂದ ಐತಿಹಾಸಿಕ ದಾಖಲೆಗಳಾಗಿವೆ. ಇಂತಹ ಮಹಾನ್ ವಿದ್ವಾಂಸರ ವ್ಯಕ್ತಿಚಿತ್ರವನ್ನು ಸಂಪಾದಿಸಿರುವ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅವರ ಕೆಲಸ ನಿಜಕ್ಕೂ ಮೆಚ್ಚುವಂತದ್ದು. 

About the Author

ಪೂರ್ಣಿಮಾ ಆರ್.
(16 June 1954)

ಡಾ ಆರ್. ಪೂರ್ಣಿಮಾ ಅವರು ಕನ್ನಡ ಪತ್ರಿಕೋದ್ಯಮದಲ್ಲಿ ಕಳೆದ 35 ವರ್ಷಗಳಿಂದ ಕ್ರಿಯಾಶೀಲವಾಗಿರುವ ಪ್ರತಿಭಾವಂತ ಪತ್ರಕರ್ತೆ ಮತ್ತು ಅಂಕಣಗಾರ್ತಿ. ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿಯಲ್ಲಿ ಪ್ರಥಮ ರ್‍ಯಾಂಕ್ ಮತ್ತು ಸುವರ್ಣ ಪದಕಗಳ ಮನ್ನಣೆ ಗಳಿಸಿದವರು. ಜನಪರ ಚಳವಳಿಗಳ ಸಾಂಗತ್ಯದಲ್ಲಿ ರೂಪುಗೊಂಡ ವ್ಯಕ್ತಿತ್ವ.ಉದಯವಾಣಿ ಬೆಂಗಳೂರು ಆವೃತ್ತಿಯ ಸಂಪಾದಕ ಸ್ಥಾನದ ಜವಬ್ದಾರಿ ನಿರ್ವಹಿಸಿದ ಪ್ರಥಮ ಮಹಿಳೆ ಎಂಬ ದಾಖಲೆಯನ್ನು ಪಡೆದುಕೊಂಡವರು. ವಿವಿಧ ಕ್ಷೇತ್ರಗಳನ್ನು ಕುರಿತು ಬರೆಯಬಲ್ಲ ಅಧ್ಯಯನಶೀಲ, ವಿಶ್ಲೇಷಣಾತ್ಮಕ ಪ್ರವೃತ್ತಿ, ಪತ್ರಿಕೋದ್ಯಮದ ಸಾಧನೆಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿ,ಪುರಸ್ಕಾರಗಳು ಇವರಿಗೆ ಲಭಿಸಿವೆ.  ಪೂರ್ಣಿಮಾ ಆರ್. ಅವರು ಲೇಖಕಿಯಾಗಿಯೂ ಜನಪ್ರಿಯ. ಸ್ನೇಹಸೇತು, ಚಿತ್ತಗಾಂಗ್ ...

READ MORE

Related Books