ಕನ್ನಡದ ಗೀತೆಗಳನ್ನು ಹಾಡುವ ಸಂಕೀರ್ತನ ಸಂಪ್ರದಾಯವನ್ನು ಮೊದಲಿಗೆ ಆರಂಭಿಸಿದ ಹರಿದಾಸ ಪರಂಪರೆಯ ಶ್ರೀಪಾದರಾಯರ ಬದುಕು, ಅನನ್ಯ ಸಿದ್ಧಿ ಸಾಧನೆಗಳ ವಿವರ ಈ ಕೃತಿಯಲ್ಲಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ಕಾಲ ದೇಶ ಜೀವನ ವಿಚಾರ ,ಕೃತಿಗಳು ,ಕೀರ್ತನೆಗಳ ಕಾವ್ಯ ಸ್ವಾರಸ್ಯ ಹಾಗೂ ಶೈಲಿ.
ಮೊದಲ ಮುದ್ರಣ 2004
ಶ್ರೀಮತಿ ಡಾ. ಟಿ.ಎನ್.ನಾಗರತ್ನ ಇವರು ಹರಿದಾಸ ಸಾಹಿತ್ಯದಲ್ಲಿ ಮಹತ್ವದ ಹೆಸರು. 35 ವರ್ಷಗಳ ಕಾಲ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರಿನಲ್ಲಿ, ಸಂಶೋಧನ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಹಲವು ಕೀರ್ತನೆಗಳನ್ನು ರಚಿಸಿ ಜನಪ್ರಿಯರಾಗಿದ್ದಾರೆ. ನಾಗರತ್ನರವರು ಹುಟ್ಟಿದ್ದು ಮಧ್ಯಪ್ರದೇಶದ ಸಿಯೋನಿಯಲ್ಲಿ 1945 ಮೇ 29ರಂದು. 1965ರಲ್ಲಿ ಪ್ರಥಮದರ್ಜೆ, ಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕದೊಡನೆ ಪಡೆದ ಬಿ.ಎ. ಪದವಿ. ನಂತರ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ. ಇಲ್ಲೂ ಕೂಡ ಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕದೊಡನೆ ಗಳಿಸಿದ ಪದವಿ. 1970ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ...
READ MORE