ಸಮಗ್ರ ಸಂಶೋಧಕ ಡಾ. ಎಂ.ಎಂ.ಕಲಬುರ್ಗಿ

Author : ಜೆ.ಎಂ.ನಾಗಯ್ಯ

Pages 56




Published by: ಕರ್ನಾಟಕ ವಿಶ್ವವಿದ್ಯಾಲಯ
Address: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

Synopsys

ಮುಂಡರಗಿಯಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ವ್ಯಾಸಾಂಗ ವಿಸ್ತರಣಾ ಉಪನ್ಯಾಸ ಶಿಬಿರದ ವೇಳೆ ಡಾ.ಜೆ.ಎಂ.ನಾಗಯ್ಯ ಅವರು ಕಲಬುರ್ಗಿ ಕುರಿತು ನೀಡಿದ ಉಪನ್ಯಾಸದ ವಿಸ್ತೃತ ರೂಪ ಈ ಕೃತಿ. ಕಲಬುರ್ಗಿ ಅವರ ಜೀವನ, ಸಂಶೋಧನೆ ಹಾಗೂ ಸೃಜನಶೀಲತೆಯನ್ನು ಮೂರು ಪ್ರತ್ಯೇಕ ವಿಭಾಗಗಳಲ್ಲಿ ಮಂಡಿಸಲಾಗಿದೆ.

About the Author

ಜೆ.ಎಂ.ನಾಗಯ್ಯ

ಹಳಗನ್ನಡ ಸಾಹಿತ್ಯ, ಸಂಸ್ಕೃತಿ, ಶಾಸನಗಳ ಅಧ್ಯಯನ, ಛಂದಸ್ಸು, ಗ್ರಂಥ ಸಂಪಾದನೆ, ಹಸ್ತಪ್ರತಿ ಶಾಸ್ತ್ರದಲ್ಲಿ ವಿಶೇಷ  ಕೃಷಿ ಕೈಗೊಂಡಿರುವ ಜೆ.ಎಂ. ನಾಗಯ್ಯ ಅವರು ಕನ್ನಡದ ಪ್ರತಿಭಾವಂತ ಲೇಖಕರಲ್ಲಿ ಒಬ್ಬರು. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ನಾಗಯ್ಯ ಅವರ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ, ಗ್ರಂಥಾಲಯ ವಿಜ್ಞಾನದಲ್ಲಿ ಪದವಿ- ಸ್ನಾತಕೋತ್ತರ ಪದವಿ ಪಡೆದಿದ್ದು, ಶಾಸನಶಾಸ್ತ್ರ-ಅನುವಾದದಲ್ಲಿ ಡಿಪ್ಲೋಮಾ, ಡಾ.ಎಂ. ಎಂ. ಕಲಬುರ್ಗಿ ಮಾರ್ಗದರ್ಶನದಲ್ಲಿ ಪಿಎಚ್ ಡಿ ಪೂರ್ಣಗೊಳಿಸಿದ್ದಾರೆ. ಕರ್ನಾಟಕ ವಿವಿಯ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷರು, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಶಾಸನಗಳು, 6ನೇ ವಿಕ್ರಾಮಾದಿತ್ಯನ ಶಾಸನಗಳು ಒಂದು ಅಧ್ಯಯನ, ಕಲಕೇರಿ ಶಿಲ್ಪಗಳಲ್ಲಿ ಶಿವಶರಣರು, ...

READ MORE

Related Books