ತಮಿಳು ನಾಡಿನ ಪ್ರಸಿದ್ದ ನಟಿ ಮತ್ತು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನ ಕೆಲವು ಪ್ರಮುಖ ಘಟನೆಗಳನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಜಯ ಅವರ ಸಿಟ್ಟು ಸೆಡವು, ಈರ್ಷೆ, ವಿರೋಧಗಳನ್ನು , ಸೋತಾಗಲೆಲ್ಲ ಮತ್ತೆ ಎದ್ದು ಬರುವ ಛಲ, ಹೀಗೆ ಜಯ ಅವರ ರಾಜಕೀಯ, ಸಾಮಾಜಿಕ ಮತ್ತು ವೈಯುಕ್ತ ಜೀವನದ ಮೇಲೆ ಬೆಳಕು ಚೆಲ್ಲಲಾಗಿದೆ. ಜಯಾ ಬದುಕಿನ ಗುಟ್ಟುಗಳನ್ನು ಮೋಹನ್ ರಾಂ ಬಿಚ್ಚಿಡುತ್ತಾ, ವಿಶ್ಲೇಷಿಸುತ್ತಾ ಹೋಗುತ್ತಾರೆ. 'ತಂದೆ ಇಲ್ಲ, ತಾಯಿಯ ಕೆಲಸ ಏನು ಎಂದರೆ ಸ್ಪಷ್ಟತೆಯಿಲ್ಲ, ನಟಿ ಎಂದರೆ ಕಿಸಕ್ಕನೆ ನಗುವ ಸ್ನೇಹಿತೆಯರು' ಈ ಸಾಲೊಂದೇ ಜಯಾರ ಬಾಲ್ಯಕ್ಕೆ ಕನ್ನಡಿ. ಅಮ್ಮನಂತೆ ಸಣ್ಣಪುಟ್ಟ ಪಾತ್ರಗಳಿಗೆ ಒಗ್ಗಿಕೊಳ್ಳದೇ ಹಿರೋಯಿನ್ ಆಗಬೇಕು, ಆ ಮೂಲಕ ಗತ್ತು ದೌಲತ್ತುಗಳನ್ನು ಹೊಂದಬೇಕು ಎನ್ನುವ ಬಯಕೆಯನ್ನು ವಿವರಿಸಲಾಗಿದೆ ಎಂಜಿಆರ್-ಜಯಾ ಇಬ್ಬರ ನಡುವಿನದು ಸ್ನೇಹ, ಪ್ರೇಮ, ಮದುವೆ ಪ್ರಯತ್ನ ಎಂದು ವಿವರಿಸಲಾಗಿದೆ.
©2024 Book Brahma Private Limited.