ಒಡನಾಡಿ- ವಿಲಿಯಂ ಅವರ ಬದುಕು, ಬರಹ ಒಂದು ಅಧ್ಯಯನದ ಕೃತಿ. ಲೇಖಕ, ಕವಿ ವಿಲಿಯಂ ಒಬ್ಬ ಸಜ್ಜನರು, ಕ್ರೈಸ್ತರು ಬೆರೆತು ಬಾಳಬೇಕು ಎಂಬ ತತ್ವವನ್ನು ಅವರಿಂದ ಕಲಿಯಬೇಕು. ಒಬ್ಬ ಧಾರ್ಮಿಕ ವ್ಯಕ್ತಿಯಾಗಿರುವುದು ಹಾಗೂ ದೇಶದ ಒಬ್ಬ ಉತ್ತಮ ಪ್ರಜೆಯಾಗುವುದು, ಇವೆರಡೂ ಒಂದೇ ವ್ಯಕ್ತಿತ್ವದೊಳಗಿನ ಎರಡು ತುದಿಗಳು, ಒಂದು ಒಳತುದಿಯಾದರೆ ಮತ್ತೊಂದು ಹೊರ ತುದಿ. ಇವುಗಳ ನಡುವೆ ಸಮನ್ವಯ ಸಾಧಿಸುವುದು ಸುಲಭವಲ್ಲ, ಆದರೆ ಅದನ್ನು ವಿಲಿಯಂ ಸಾಧಿಸಿದ್ದಾರೆ. ಅವರ ಕ್ರಿಸ್ತ ಕಾವ್ಯ, ವಿಚಾರವಾದಿ ರಾಮದಾಸರ ಬಗ್ಗೆ ಅವರು ಬರೆದಿರುವ ಪುಸ್ತಕ ಇದಕ್ಕೆ ನಿದರ್ಶನ. ವಿಲಿಯಂ ಒಂದು ಸಾಹಿತ್ಯ ಅಧ್ಯಯನ ಪುಸ್ತಕವಿದ್ದಂತೆ ಹಾಗಾಗೀ ಅವರ ಬದುಕು, ಬರಹ ಅವರ ಅಭಿಮಾನಿಗಳನ್ನು ತಲುಪಲಿ, ಅವರಲ್ಲಿ ಸ್ಫೂರ್ತಿ ಮೂಡಿಸಲಿ ಎಂಬ ಆಶಯದೊಂದಿಗೆ ಈ ಕೃತಿ ರಚಿತವಾಗಿದೆ.