ಸುನಂದಮ್ಮನವರು ಕಥೆ, ಕಾದಂಬರಿಗಳ ಯುಗದಲ್ಲಿ ಹಾಸ್ಯ ಲೇಖನ ರಚಿಸಿ ಈ ಜನಮಾನಸಕ್ಕೆ ಹತ್ತಿರವಾದವರು. ಮೊದಲು ಅವರು ರಚಿಸಿದ್ದು ಕವನ, ಕಥೆಯೇ ಆದರೂ ನಂತರ ಹಾಸ್ಯ ಪ್ರಕಾರದಲ್ಲೇ ನೆಲೆ ಕಂಡುಕೊಂಡರು. ಜೀವನೋತ್ಸಾಹದ ಚಿಲುಮೆಯಾಗಿದ್ದ ಸುನಂದಮ್ಮನವರು ಕರ್ನಾಟಕ ಲೇಖಕಿಯರ ಸಂಘದ ಸ್ಥಾಪಕ ಅಧ್ಯಕ್ಷೆಯ ಹೌದು, ಅವರ ಪ್ರಕಾರ ಹಾಸ್ಯ ಸಾಹಿತ್ಯ ರಚನೆ ನಿಜಕ್ಕೂ ಕಷ್ಟಕರವಾದದ್ದು. ಮಧ್ಯಮವರ್ಗದ ಸಾಮಾನ್ಯ ಕುಟುಂಬದ ಭಂಗ-ಬವಣೆ, ಸುಖ-ದು:ಖ, ಇತರರೆದುರು ತಮ್ಮ ಸ್ಥಾನಮಾನ ಎಂದಿಗೂ ಸಣ್ಣದಾಗಬಾರದೆಂದು ಬದುಕು ನಡೆಸುವ ಬಗೆ ಎಲ್ಲವೂ ಸದಭಿರುಚಿಯ ಹಾಸ್ಯದಲ್ಲಿ ಬೆರೆತು ಓದುಗರಿಗೆ ರುಚಿಕಟ್ಟಾದ ರಸಗವಳ ಉಣಬಡಿಸುತ್ತದೆ.
ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ. ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...
READ MORE