ಇಪ್ಪತ್ತನೇ ಶತಮಾನದ ಬಹುದೊಡ್ಡ ಚಿಂತಕ ನೋಮ್ ಚಾಮ್‌ಸ್ಕಿ. ಭಾಷೆ, ಮಾಧ್ಯಮ, ರಾಜಕಾರಣ, ಸಮಾಜ ವಿಜ್ಞಾನ, ವಿಜ್ಞಾನ, ಸಂಸ್ಕೃತಿ ಹೀಗೆ ಅವರು ವಿಸ್ತರಿಸಿಕೊಳ್ಳದ ಕ್ಷೇತ್ರಗಳೇ ಇಲ್ಲ. ಅಮೆರಿಕನ್ನರಾದ ಅವರನ್ನು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ 'ಜಗತ್ತಿನಲ್ಲೇ ಜೀವಂತವಿರುವ ಬಹುದೊಡ್ಡ ಬುದ್ಧಿಜೀವಿ' ಎಂದು ವರ್ಣಿಸಿದೆ.
ಈ ಮಹಾನ್ ಚಿಂತಕನ ಬಗೆಗಿನ ಇನ್ನೊಂದು ಮಾತು ಹೀಗಿದೆ: ಚಾಮ್ ಸ್ಕಿ ಫ್ರಾಯ್ಡ್ ಹಾಗೆ - ಮನಸ್ಸಿನ ಸೂಕ್ಷ್ಮ ಪದರಗಳನ್ನು ತೆರೆದಿಟ್ಟವರು. ಚಾಮ್ ಸ್ಕಿ ಐನ್‌ಸ್ಟೀನನ ಹಾಗೆ - ಭಾಷೆ ಮತ್ತು ರಾಜಕೀಯ ಚಿಂತನೆಗಳೆರಡನ್ನೂ ಬೆಸೆದವರು. ಚಾಮ್ ಸ್ಕಿ ಪಿಕಾಸೋನ ಹಾಗೆ - ತಾನು ಕಟ್ಟಿದ ಸಿದ್ಧಾಂತಗಳನ್ನೇ ಒಡೆದು ಕಟ್ಟಿದವರು.
ಅವರನ್ನು ಕನ್ನಡಕ್ಕೆ ಪರಿಚಯಿಸುವ ಉದ್ದೇಶದಿಂದ ಅಭಿನವ ಪ್ರಕಾಶನ ’ಮನುಕುಲದ ಮಾತುಗಾರ’ ಹೆಸರಿನಲ್ಲಿ ಕೃತಿಯನ್ನು ಹೊರತಂದಿದೆ. ಚಿಂತಕ, ಬರಹಗಾರ, ಪ್ರಕಾಶಕ ನ. ರವಿಕುಮಾರ ಕೃತಿಯ ಸಂಪಾದಕರು.
ನ. ರವಿಕುಮಾರ್ ಅವರು ಮೂಲತಃ ತುಮಕೂರಿನವರು. ಕುಣಿಗಲ್ ತಾಲೋಕಿನ ಪುಟ್ಟಯ್ಯನಪಾಳ್ಯ, ಹಾಲಶೆಟ್ಟಿಹಳ್ಳಿ, ಕೆಂಪಸಾಗರ, ಬೆಂಗಳೂರು ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು, ಎಸ್.ಕೆ. ಎಫ್. ಬೇರೀಂಗ್ಸ್ ಕಾರ್ಖಾನೆಯಲ್ಲಿ 25 ವರ್ಷಗಳ ದುಡಿದಿದ್ದಾರೆ. ಆನಂತರ ‘ಅಭಿನವ’ ಪ್ರಕಾಶನವನ್ನು ಆರಂಭಿಸಿ ಆ ಮೂಲಕ ವಿವಿಧ ಲೇಖಕರ 500ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಹಾಗೂ ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಉಪನಿಷತ್ತು(2018), ಮಕ್ಕಳಿಗಾಗಿ ಕೆ.ಎಸ್ . ನರಸಿಂಹಸ್ವಾಮಿ, ಆಯ್ದ ವಿಮರ್ಶೆಗಳು, ದೇವರ ಗೊಡವೆ ಕೂಡಾ ನನಗೆ ಬೇಡ, ಮನುಕುಲದ ಮಾತುಗಾರ, ಮಾತು ತಲೆ ಎತ್ತಿದ ಬಗೆ ಅವರ ಪ್ರಕಟಿತ ಕೃತಿಗಳು. ಕರ್ನಾಟಕ ಪ್ರಕಾಶಕರ ...
READ MORE