‘ಗಿರೀಶ್ ಕಾರ್ನಾಡ’ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಜನಪ್ರಿಯ ಪುಸ್ತಕ ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಈ ಕೃತಿಯನ್ನು ಲೇಖಕ ಬಸವರಾಜ ಸಬರದ ಸಂಪಾದಿಸಿದ್ದಾರೆ. ಇಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಯಾಗಿರುವ ಗಿರೀಶ್ ಕಾರ್ನಾಡರ ಜೀವನದ ಹತ್ತು ಹಲವು ಸಂಗತಿಗಳನ್ನು ಪ್ರಸ್ತಾಪಿಸುತ್ತಾ ಅವರು ಸಲ್ಲಿಸಿದ ನಾಟಕ-ರಂಗಭೂಮಿ ಸಾಹಿತ್ಯದ ಹಲವು ಆಯಾಮಗಳನ್ನು ಪ್ರತಿಬಿಂಬಿಸುತ್ತ ವಸ್ತು ನಿಷ್ಠವಾಗಿ ನಿರೂಪಿಸಿದ್ದಾರೆ. ಇಲ್ಲಿ ಪೀಠಿಕೆಯೊಂದಿಗೆ ಜನನ-ಬಾಲ್ಯ, ನಾಟಕ ಸಾಹಿತ್ಯ ಮತ್ತು ರಂಗಭೂಮಿ, ಚಲನಚಿತ್ರ ಹಾಗೂ ಕಿರುಚಿತ್ರ ಲೇಖನಗಳು ಹಾಗೇ ಕರ್ನಾಡರ ನಾಟಕ ಕೃತಿಗಳು ಶೀರ್ಷಿಕೆಯಡಿಯಲ್ಲಿ ಯಯಾತಿ, ಹಯವರ್ದನ, ಹಿಟ್ಟಿನ ಹುಂಜ, ನಾಗಮಂಡಲ, ಅಗ್ನಿ ಮತ್ತು ಮಳೆ, ಟಿಪ್ಪು ಕಂಡ ಕನಸು, ತಲೆದಂಡ ಲೇಖನಗಳಿವೆ. ಆನಂತರದಲ್ಲಿ ಅನುಬಂಧ, ಪ್ರಮುಖ ಘಟನೆಗಳು, ಪ್ರಶಸ್ತಿ-ಪುರಸ್ಕಾರಗಳು, ನಾಟಕ ಕೃತಿಗಳು ಹೀಗೆ ಹಲವು ರೀತಿಗಳಲ್ಲಿ ಗಿರೀಶ್ ಕಾರ್ನಾಡರ ಕಲೆ ರಂಗಭೂಮಿ ಬದುಕಿನ ಕುರಿತು ವಿಶೇಷ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.
ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ನನ್ನವರ ಹಾಡು, ಹೋರಾಟ, ...
READ MORE