ಡಾ, ವಿಜಯಾ ಅವರು ನಾಡಿನ ಸಾಂಸ್ಕೃತಿಕ ತಾರೆ. ಶ್ರೀರಂಗರ ನಾಟಕಗಳ ಕುರಿತು ಸಂಶೋಧನೆ ನಡೆಸಿ ಅವರು ಪಿಎಚ್. ಡಿ ಪದವಿ ಪಡೆದಿದ್ದಾರೆ. ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿದ ಅವರು ಸದಾ ಸಮಾಜಮುಖಿ. ಅವರು ಕಟ್ಟಿದ ಇಳಾ ಮುದ್ರಣಾಲಯ ಮಹಿಳೆಯೊಬ್ಬರ ಛಲದ ಹೆಜ್ಜೆಗಳಿಗೆ ಸಾಕ್ಷಿ. ಕನ್ನಡದ ಲಿತ-ಬಂಡಾಯ ಚಳವಳಿಗೆ ಅವರು ನೀಡಿದ ಉತ್ತೇಜನ ಮಹತ್ವದ್ದು. ಅನೇಕ ನಿಯತಕಾಲಿಕೆಗಳಿಗೆ, ಮಾಸಪತ್ರಿಕೆಗಳಿಗೆ ಅಂಕಣಕಾರರಾಗಿ, ಸಂಪಾದಕಿಯಾಗಿ ಕೆಲಸ ಮಾಡಿದ್ದಾರೆ. ಯುವಜನರ ನೆಚ್ಚಿನ ಕಣ್ಮಣಿಯಾಗಿರುವ ಇವರ ಪರಿಚಯವನ್ನು ಮಾಡಿಕೊಡುವ ಹಿನ್ನೆಲೆಯಲ್ಲಿ ಡಾ. ಕೋ.ವೆಂ. ರಾಮಕೃಷ್ಣೇಗೌಡರು ಹೊರತಂದಿರುವ ಪುಸ್ತಕ ಸಕಾಲಿಕವಾಗಿದೆ.
ಡಾ. ಕೋ.ವೆಂ ರಾಮಕೃಷ್ಣೇಗೌಡ ಅವರು ಕನ್ನಡ ಪ್ರಾಧ್ಯಾಪಕರಾಗಿ, ಸಾಹಿತಿಯಾಗಿ, ಗಾಯಕರಾಗಿ, ಕನ್ನಡ ಸಂಸ್ಕೃತಿ ಚಿಂತಕರಾಗಿ ನಿರಂತರ ಕ್ರಿಯಾಶೀಲತೆಯನ್ನು ಮೈಗೂಡಿಕೊಂಡಿದ್ದಾರೆ. ಇವರು ಭಾಷೆ, ಸಾಹಿತ್ಯ, ಸಂಸ್ಕೃತಿ ಮೊದಲಾದ ವಿಷಯಗಳನ್ನು ಕುರಿತು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ಧಾರೆ. ವ್ಯಕ್ತಿಚಿತ್ರ ಪ್ರಕಾರಗಳಲ್ಲಿ 16 ಕೃತಿಗಳನ್ನು ಪ್ರಕಟಿಸಿದ್ದಾರೆ. 40 ಕ್ಕೂ ಅಧಿಕ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. 2014ರಲ್ಲಿ ಕೆಂಪೇಗೌಡ ಪ್ರಶಸ್ತಿ ಪಡೆದ ಇವರು, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಉತ್ತಮ ಉಪನ್ಯಾಸಕರ ಪ್ರಶಸ್ತಿ, ಕನ್ನಡ ಭೂಷಣ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವರು ಸದ್ಯ ಬಿ.ಎಂ. ...
READ MORE