ಬಿ. ಶಿವಮೂರ್ತಿ ಶಾಸ್ತ್ರಿ ಮಹಾತ್ಮ ಗಾಂಧಿ ಅವರ ಪ್ರಭಾವದಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು. ಗಮಕ ವಾಚನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಬಂದ ಇವರು ನಂತರ ಪೂರ್ಣಕಾಲಿಕ ಸಾಹಿತ್ಯದೆಡೆಗೆ ಆಕರ್ಷಿತರಾಗಿ ಶರಣ ಸಾಹಿತ್ಯ ಸಂಶೋಧನೆಯಲ್ಲಿ ಮಹತ್ತರ ಕೆಲಸಗಳನ್ನು ಮಾಡಿದರು. ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ಇವರ ಬದುಕನ್ನು, ಜೀವನ ಸಾಧನೆಯನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ಸಾಹಿತ್ಯ, ನಾಟಕ ರಂಗಭೂಮಿ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರಿಯರನ್ನಾಗಿ ತೊಡಗಿಸಿಕೊಂಡವರು ಬಿ. ಸಿದ್ಧಲಿಂಗಯ್ಯ ಕಂಬಾಳು. ನಿಸರ್ಗಪ್ರಿಯ ಎಂಬ ನಾಮಾಂಕಿತದಿಂದ ಬಹು ಜನಪ್ರಿಯತೆ ಗಳಿಸಿದ್ದ ಇವರು ಬೆಂಗಳೂರು ಗ್ರಾಮಾಂತರದ ಕಂಬಾಳು ಗ್ರಾಮದಲ್ಲಿ ಜನಿಸಿದರು. ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ. ನಂತರ ಕೆಲ ವರ್ಷ ಗುಜ ಕಂಪನಿಯಲ್ಲಿ ಅಭಿನಯಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ನಾಟಕ ರಚನೆ ಪ್ರಾರಂಭಿಸಿದರು. ಕಾದಂಬರಿ, ಮಹಾಕಾವ್ಯ, ಜನಪದ ಗ್ರಂಥ ಸಂಪಾದನೆ, ಸಂಶೋಧನೆ(ಇತಿಹಾಸ) ಮುಂತಾದ ಪ್ರಕಾರಗಳಲ್ಲಿ ರಚನೆ ಮಾಡಿದ್ದಾರೆ. ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾಗಿ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೆಶಕರಾಗಿ, ನಾಟಕ ಅಕಾಡೆಮಿಯ ರಿಜಿಸ್ಟಾರ್ ಮುಂತಾಗಿ ಗೌರವ ಹುದ್ದೆಗಳನ್ನು ಅಲಂಕರಿಸಿ ಕಾರ್ಯ ನಿರ್ವಹಣೆ. ಬೆನಕನಕೆರೆ, ಸ್ವರ್ಗಸ್ಥ ('ಸ್ವರ್ಗಸ್ಥ' ಕೃತಿಗೆ ರಾಜ್ಯ ಸಾಹಿತಿ ಅಕಾಡೆಮಿಯ ...
READ MORE