ಕವಿ, ತತ್ವಪದಕಾರ ಕಡಕೋಳ ಮಡಿವಾಳಪ್ಪ ಅವರ ಜೀವನ ಚರಿತ್ರೆ ಕೃತಿ ʻಬಂಡಾಯದ ಕಿಡಿ ಕಡಕೋಳ ಮಡಿವಾಳಪ್ಪʼ. ಲೇಖಕಿ ಮೀನಾಕ್ಷಿ ಬಾಳಿ ಅವರು ಬರೆದ ಈ ಕೃತಿಯು ಕನ್ನಡ ತತ್ವಪದ ಪ್ರಕಾರಕ್ಕೆ ಪ್ರಮುಖ ಅನುಭಾವಿ ಕವಿಗಳಲ್ಲೊಬ್ಬರಾದ ಕಡಕೋಳ ಮಡಿವಾಳಪ್ಪನವರು ನೀಡಿದ ಕೊಡುಗೆ, ಅವರ ಬಾಲ್ಯ, ವಚನಗಳು, ಪ್ರಸಿದ್ದಿಯನ್ನು ಪರಿಚಯಿಸುತ್ತದೆ. ಇವರು ಸಂಪ್ರದಾಯವಾದಿ ಅಧ್ಯಾತ್ಮದಲ್ಲಿ ಮನೆಮಾಡಿಕೊಂಡಿದ್ದ ಜಡತ್ವವನ್ನು ದೂರೀಕರಿಸಿ ಭಾರತೀಯ ತತ್ವ ಶಾಸ್ತ್ರಕ್ಕೆ ಹೊಸ ತಿರುವು ನೀಡಿದವರು. ಪ್ರಸ್ತುತ ಪುಸ್ತಕದಲ್ಲಿ ಮೀನಾಕ್ಷಿ ಅವರು ಮಡಿವಾಳಪ್ಪನವರ ತತ್ವಪದಗಳನ್ನೂ ವಿವರಿಸಿದ್ದಾರೆ.
ಸಂಶೋಧಕಿ, ಮಹಿಳಾ ಹೋರಾಟಗಾರ್ತಿ, ಬರಹಗಾರ್ತಿ, ಚಿಂತಕಿ ಮೀನಾಕ್ಷಿ ಬಾಳಿ ಅವರು ಕನ್ನಡದ ಪ್ರಮುಖ ಲೇಖಕಿ. ಸದಾ ಚಿಂತನೆಯತ್ತ ತಮ್ಮ ನಡೆ-ನುಡಿಯನ್ನು ಕೊಂಡೊಯ್ಯುವ ಮೀನಾಕ್ಷಿ 1962 ಜೂನ್ 22 ಗುಲ್ಬರ್ಗಾದಲ್ಲಿ ಜನಿಸಿದರು. ’ಮಡಿವಾಳಪನವರ ಶಿಷ್ಯರ ತತ್ವ ಪದಗಳು, ಖೈನೂರು ಕೃಷ್ಣಪ್ಪನವರ ತತ್ವಪದಗಳು, ಅನುಭಾವಿ ಕವಿ ಕಡಕೋಳ ಮಡಿವಾಳಪ್ಪನವರು ಮತ್ತು ಅವರ ಶಿಷ್ಯರು, ತನ್ನ ತಾನು ತಿಳಿದ ಮೇಲೆ, ಚಿವುಟದಿರಿ ಚಿಗುರು, ಮನದ ಸೂತಕ ಹಿಂಗಿದೊಡೆ’ ಮುಂತಾದ ಪ್ರಮುಖ ಕೃತಿಗಳನ್ನು ಹೊರತಂದಿದ್ಧಾರೆ. ’ಮನದ ಸೂತಕ ಹಿಂಗಿದೊಡೆ’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕಮಲಾ ರಾಮಸ್ವಾಮಿ ದತ್ತಿ ಬಹುಮಾನ ಲಭಿಸಿದೆ. ...
READ MORE