ಮೂಲತಃ ಕರ್ನಾಟಕದವರಾದ ಎಚ್.ವೈ.ಶಾರದಾಪ್ರಸಾದ್ ಅವರು ಮಾಜಿ ಪ್ರಧಾನಿ ಇಂದಿರಾಗಾಂಧಿ, ಮೊರಾರ್ಜಿ ದೇಸಾಯಿ , ಮತ್ತು ರಾಜೀವ್ ಗಾಂಧಿ ಅವರ ಮಾಧ್ಯಮ ಸಲಹೆಗಾರ ಮತ್ತು ಆಪ್ತ ಕಾರ್ಯದರ್ಶಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದರು. ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಇವರು ದೇಶದ ಹೆಮ್ಮೆಯ ಪತ್ರಕರ್ತರಲ್ಲಿ ಪ್ರಮುಖರಾಗಿದ್ದರು. ಸಾಹಿತ್ಯ, ಸಂಗೀತ, ಸೌಂದರ್ಯ, ಕಲೆ, ಕ್ರಿಕೆಟ್, ರಾಜಕೀಯ ಹಾಗೂ ಇತಿಹಾಸದಲ್ಲಿ ಅವರ ಜ್ಞಾನ ಅಗಾಧವಾದುದು. ಶಿವರಾಮ ಕಾರಂತರ ಕೆಲವು ಪ್ರಮುಖ ಕಾದಂಬರಿಗಳನ್ನು ಇಂಗ್ಲಿಷ್ ಗೆ ಅನುವಾದ ಮಾಡಿದ್ದಾರೆ. ವೃತ್ತಿ ನಿಷ್ಠೆಯಿಂದಲೂ, ಸಾಹಿತ್ಯ ಪ್ರೀತಿಯಿಂದಲೂ ಅವರ ವ್ಯಕ್ತಿತ್ವ ಘನತೆ ಬಹಳ ಮೆಚ್ಚುವಂತದ್ದು. ಇವರ ವ್ಯಕ್ರಿಚಿತ್ರ ಸಂಪಾದನೆಯನ್ಬು ಲೇಖಕ ಕೆ. ಸತ್ಯನಾರಾಯಣ ಅವರು ಹೊರತಂದು ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೃತಿಯನ್ನು ನೀಡಿದ್ದಾರೆ.
ಕೆ.ಸತ್ಯನಾರಾಯಣ ಅವರು ಹುಟ್ಟಿದ್ದು 1954 ಏಪ್ರಿಲ್ 21 ರಂದು. ಮಂಡ್ಯ ಜಿಲ್ಲಾ ಮದ್ದೂರು ತಾಲೋಕು ಕೊಪ್ಪ ಗ್ರಾಮದಲ್ಲಿ. 1972ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ(ಸುವರ್ಣ ಪದಕದೊಂದಿಗೆ). 1978ರಲ್ಲಿ ಇದೇ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ(ಏಪ್ರಿಲ್ 2014ರಲ್ಲಿ ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾಗಿ, ಬೆಂಗಳೂರು) ನಿವೃತ್ತಿ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ...
READ MORE