ಲೆಬನಾನ್ ಮೂಲದ ಅಮೆರಿಕನ್ ಕವಿ ಖಲೀಲ್ ಗಿಬ್ರಾನ್ ತತ್ವಜ್ಞಾನಿ ಕೂಡ. ’ಸುಖ ದುಃಖದಲ್ಲಿ ಒಂದು ನಿಮ್ಮೊಡನೆ ಊಟಕ್ಕೆ ಕುಳಿತರೆ ಮತ್ತೊಂದು ನಿಮ್ಮ ಹಾಸಿಗೆಯ ಮೇಲೆ ನಿದ್ರಿಸಿರುತ್ತದೆ’, ’ಪದಗಳು ಕಾಲ ರಹಿತ ಅವುಗಳನ್ನು ಹೇಳುವಾಗ ಮತ್ತು ಬರೆಯುವಾಗ ಅವುಗಳು ಕಾಲ ರಹಿತ ಎಂಬುದನ್ನು ತಿಳಿದು ಹೇಳಬೇಕು, ಬರೆಯಬೇಕು’ ಎಂಬಂತಹ ಚಿಂತನೆಗಳನ್ನು ನೀಡಿದ ಆತನ ಕೃತಿಗಳು ಜಗತ್ತಿನ 110 ಭಾಷೆಗಳಿಗೆ ಅನುವಾದಗೊಂಡಿವೆ. ಇದು ಅವನ ಜನಪ್ರಿಯತೆಗೆ ಸಾಕ್ಷಿ. ’ದ ಪ್ರಾಫೆಟ್’ ಆತನ ಪ್ರಸಿದ್ಧ ಕೃತಿಗಳಲ್ಲಿ ಒಂದು.
ಖಲೀಲ್ ಗಿಬ್ರಾನ್ ಇತ್ಯೋಪರಿಗಳನ್ನು ಕನ್ನಡಕ್ಕೆ ತಂದಿದ್ದಾರೆ ಲೇಖಕ ಪ್ರಭುಶಂಕರ.
ಬರಹಗಾರರಾದ ಪ್ರಭುಶಂಕರ ಅವರು ಜನಿಸಿದ್ದು 1929 ಫೆಬ್ರುವರಿ 15ರಂದು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಕುವೆಂಪು ಅವರ ಮಾರ್ಗದರ್ಶನದಲ್ಲಿ ‘ಕನ್ನಡದಲ್ಲಿ ಭಾವಗೀತೆ’ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದರು. ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು ಅಮೆರಿಕ ಭೇಟಿಯ ಕುರಿತು ’ಅಮೆರಿಕಾದಲ್ಲಿ ನಾನು ಮತ್ತು ಶಾಂತಿ’ ಎಂಬ ಪ್ರವಾಸ ಕಥನ ರಚಿಸಿದ್ದಾರೆ. ಅವರ ಕೆಲವು ಕೃತಿಗಳು- ಕನ್ನಡದಲ್ಲಿ ಭಾವಗೀತೆ, ಅಂಗುಲೀಮಾಲ, ಆಮ್ರಪಾಲಿ, ಖಲೀಲ್ ಗಿಬ್ರಾನ್, ಕಾವ್ಯಯೋಗ, ಅಮೆರಿಕದಲ್ಲಿ ನಾನು ಶಾಂತಿ, ನಿವೇದಿತಾ, ಜನ-ಮನ, ಚಿಂತೆ-ಚಿಂತನೆ, ಮಂದಹಾಸ ಮೀಮಾಂಸೆ ಇತ್ಯಾದಿ. ...
READ MORE