ಬರ್ಟೋಲ್ಟ್ ಬ್ರೆಕ್ಟ್

Author : ಜಿ.ರಾಜಶೇಖರ

Pages 1




Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಬರ್ಟೋಲ್ಟ್ ಬ್ರೆಕ್ಸ್ (೧೮೯೮-೧೯೫೬), ಕೆಲವರ ಪ್ರಕಾರ- ಶೇಕ್ಸ್ಪಿಯರ್ ನಂತರ ಕಂಡುಬಂದ  ಅತ್ಯಂತ ಶ್ರೇಷ್ಟ ನಾಟಕಕಾರ, ನಿರ್ದೇಶಕನೂ ಆಗಿದ್ದ ಬೈಕ್ 'ಎಪಿಕ್ ರಂಗಭೂಮಿ'ಯ ಆದ್ಯ ಪ್ರವರ್ತಕ, ಅವನು ಜರ್ಮನ್ ಭಾಷೆಯ ಶ್ರೇಷ್ಟ ಕವಿ ಕೂಡಾ, ಜಗತ್ತಿನ ಎಲ್ಲೆಡೆ ಅವನಿಗೆ ಅಭಿಮಾನಿಗಳು ಇದ್ದಾರೆ.

ಬ್ರೆಕ್ಸ್ನನ್ನು ವಿರೋಧಿಸುವವರ ಸಂಖ್ಯೆಯೂ ಸಣ್ಣದಲ್ಲ. ಅವನ ನಾಟಕಗಳನ್ನು ಸುಟ್ಟು, ಅವನನ್ನು ಕೊಲ್ಲಲು ಹವಣಿಸಿದ ಜರ್ಮನಿಯ ನಾಝಿಗಳು ಮತ್ತು ಅವನನ್ನು ವಿಚಾರಣೆಗೆ ಒಳಪಡಿಸಿದ ಅಮೆರಿಕದ ಶಾಸಕರಿಂದ ಹಿಡಿದು, ಕಮ್ಯುನಿಸಂನ ಆಜನ್ಮ ವೈರಿಗಳು- ಹೀಗೆ ನಾನಾ ವಿಧದ ಜನ ಕಾಣಸಿಗುತ್ತಾರೆ. ಬ್ರೆಕ್ಟ್ ಕಮ್ಯುನಿಸಂನ ತತ್ವದಲ್ಲಿ ಗಾಢನಿಷ್ಟೆ ಉಳ್ಳವನಾದರೂ ಕಮ್ಯುನಿಸ್ಟ್ ಅಧಿಕಾರಶಾಹಿಯ ಜೊತೆಗೂ ಅವನ ಸಂಬಂಧ ಹಿತಕರವಾಗಿರಲಿಲ್ಲ. ಯಾವುದೇ ವ್ಯವಸ್ಥೆಗಾದರೂ ಅಪಥ್ಯವಾಗುವ ಬಂಡುಕೋರತನ, ಅವನ ಬದುಕಿನ ಮೂಲದ್ರವ್ಯವಾಗಿದೆ. ಇವುಗಳ ಹಿನ್ನೆಲೆಯಲ್ಲಿ ಬ್ರೆಕ್ಟ್ ನ ವ್ಯಕ್ತಿತ್ವ, ವಿಚಾರಧಾರೆ, ಸಾಹಿತ್ಯವನ್ನು ಅರಿಯಲು ಈ ಪುಸ್ತಕ ಉತ್ತಮ ಕೈಪಿಡಿಯಾಗಿದೆ. 

About the Author

ಜಿ.ರಾಜಶೇಖರ
(03 April 1946 - 20 July 2022)

1946ರ ಏಪ್ರಿಲ್ 3ರಂದು ಉಡುಪಿ ಜಿಲ್ಲೆಯ ಗುಂಡ್ಮಿಯಲ್ಲಿ ಜನಿಸಿದ ಜಿ. ರಾಜಶೇಖರ ಅವರು ಪದವಿ ಪಡೆದದ್ದು ಉಡುಪಿಯಲ್ಲಿ. ಮೊದಲಿಗೆ ಕೆಲಕಾಲ ಶಿಕ್ಷಕರಾಗಿ ಕೆಲಸ ಮಾಡಿದ ಇವರು ಬಳಿಕ ಎಲ್‌ಐಸಿಯ ಉದ್ಯೋಗಿಯಾಗಿದ್ದರು. ಸಾಹಿತ್ಯ-ಸಮಾಜ- ರಾಜಕಾರನ ಕುರಿತಂತೆ ಹಾಗೂ ಕೋಮುವಾದವೂ ಸೇರಿದಂತೆ ಸಮಕಾಲೀನ ತುರ್ತಿನ ವಿದ್ಯಮಾನಗಳ ಬಗ್ಗೆ ಅವರು ಬಹುಸಂಖ್ಯೆಯ ಲೇಖನಗಳನ್ನು ಸತತವಾಗಿ ಪ್ರಕಟಿಸುತ್ತಲೇ ಬಂದಿದ್ದರೂ ಈ ಬರಹಗಳು ಸಂಕಲನಗೊಂಡು ಪ್ರಕಟಗೊಂಡಿದ್ದು ಕಡಿಮೆ. ಸಮಕಾಲೀನ ಕನ್ನಡದ ಪ್ರಮುಖ ವಿಮರ್ಶಕ- ಚಿಂತಕರೆಂದು ಮನ್ನಣೆ ಗಳಿಸಿರುವ ರಾಜಶೇಖರ ಅವರು ಎಡಪಂಥೀಯ ಧೋರಣೆಯನ್ನು ನಿಷ್ಠುರ ಆತ್ಮವಿಮರ್ಶೆಯೊಂದಿಗೆ ಕಸಿ ಮಾಡಿದವರು. ಕೃತಿಗಳು: ’ಕಾಗೋಡು ಸತ್ಯಾಗ್ರಹ’, ಪರಿಸರ ...

READ MORE

Related Books