ಪ್ರಗತಿಪರ ರೈತರಾದ ಕ.ಹು. ಬಿಜಾಪುರ ರವರು ಕಳೆದ 50 ವರ್ಷಗಳಿಂದ ನಿರಂತರವಾಗಿ ಕಲೆ, ಸಾಹಿತ್ಯ, ಸಂಸ್ಕೃತಿಯ ಸಂಗಮ, ಚೈತನ್ಯವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಇವರು ಭಾವೈಕ್ಯತೆಯ ಬಂಧುವಾಗಿ ಜೀವನದುದ್ದಕ್ಕೂ ದುಡಿದವರು. ಪತ್ರಿಕಾ ವರದಿಗಾರನಾಗಿ, ಸಾಹಿತಿಯಾಗಿ, ಸಂಘಟಕರಾಗಿ ಹೀಗೆ ಬಹುಮುಖ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಕ.ಹು. ಬಿಜಾಪುರ ರವರ ಬದುಕನ್ನು, ಜೀವನ ಸಾಧನೆಯನ್ನು ಲೇಖಕಡಾ.ಅರ್ಜುನ್ ಗೊಳಸಂಗಿ ಸಂಪಾದಿಸಿ ಈ ಕೃತಿಯಲ್ಲಿ ಮಾಹಿತಿಯನ್ನು ಒದಗಿಸಿದ್ದಾರೆ.
ಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗೊಳಸಂಗಿ ಎಂಬ ಹಳ್ಳಿಯವರಾ ಅರ್ಜುನ ಗೊಳಸಂಗಿ ಅವರು ಕವಿ-ಲೇಖಕ. 1966ರ ಜೂನ್ 10 ರಂದು ಜನಿಸಿದರು. ತಂದೆ ಯಲ್ಲಪ್ಪ ತಾಯಿ ಮಲಕಮ್ಮ. ಕೃಷಿಕ ಕುಟುಂಬಕ್ಕೆ ಸೇರಿದ ಅರ್ಜುನ ಅವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಕನ್ನಡ ಎಂ.ಎ ಮತ್ತು ಪಿಎಚ್.ಡಿ. ಪದವಿ ಪಡೆದರು. ಬಸವೇಶ್ವರ, ಡಾ. ಅಂಬೇಡ್ಕರ್ ಮತ್ತು ಭಾಷಾವಿಜ್ಞಾನದಲ್ಲಿ ಡಿಪ್ಲೋಮಾ ಪದವಿಗಳನ್ನು ಪಡೆದಿರುವ ಅವರು ಗದಗ ಸಹಕಾರಿ ಜವಳಿ ಗಿರಣಿಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ಕಾವ್ಯ, ಕತೆ, ವಿಮರ್ಶೆ ಸಂಶೋಧನೆ, ಸಾಂಸ್ಕೃತಿಕ ಅಧ್ಯಯನ, ಜಾನಪದ ಒಳಗೊಂಡಂತೆ ಇದುವರೆಗೆ 25ಕ್ಕೂ ಹೆಚ್ಚು ಕೃತಿಗಳನ್ನು ...
READ MORE