ನವಿರಾದ ಹಾಸ್ಯದಿಂದ ಓದುಗರಿಗೆ ಪ್ರಿಯವಾಗುವ ಗದ್ಯ ಬರವಣಿಗೆ ಪ್ರಭುಶಂಕರ ಅವರದ್ದು. ಪ್ರಭುಶಂಕರ ಅವರ ಗದ್ಯದ ಸೊಗಸನ್ನು ಓದಿಯೇ ಸವಿಯಬೇಕು. ಸಣ್ಣ ಸಣ್ಣ ವಾಕ್ಯಗಳು, ವಿಷಯವನ್ನು ಭಾರವಾಗದಂತೆ ಮೆದುವಾಗಿ ಕಟ್ಟಿಕೊಡುವ ಕ್ರಮ ಪ್ರಭುಶಂಕರ ಅವರ ಗದ್ಯ ಪ್ರಿಯವಾಗುವಂತ ಮಾಡುತ್ತದೆ.
ಕುವೆಂಪು ಅವರ ಶಿಷ್ಯರಾಗಿದ್ದ ಪ್ರಭುಶಂಕರ ಅವರು ತಮ್ಮ ಗುರುವನ್ನು ಕುರಿತು ಬರೆದ ಕೃತಿ ಇದು. ಕುವೆಂಪು ಅವರ ಬದುಕಿನ ವಿವಿಧ ಘಟನೆಗಳನ್ನು ಆಧರಿಸಿ ಬದುಕು ಕಟ್ಟಿಕೊಡುವ ವಿಧಾನವನ್ನು ಪ್ರಭುಶಂಕರ ಅವರು ಈ ಗ್ರಂಥದಲ್ಲಿ ಅಳವಡಿಸಿಕೊಂಡಿದ್ದಾರೆ. ಕುವೆಂಪು ಅವರ ಹಾಸ್ಯಪ್ರಜ್ಞೆ ಮತ್ತು ಜೀವನ ಪ್ರೀತಿಯನ್ನು ಬಿಂಬಿಸುವ ಹಲವು ಘಟನೆಗಳು ಮುದ ನೀಡುವ ಹಾಗಿವೆ.
ಬರಹಗಾರರಾದ ಪ್ರಭುಶಂಕರ ಅವರು ಜನಿಸಿದ್ದು 1929 ಫೆಬ್ರುವರಿ 15ರಂದು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಕುವೆಂಪು ಅವರ ಮಾರ್ಗದರ್ಶನದಲ್ಲಿ ‘ಕನ್ನಡದಲ್ಲಿ ಭಾವಗೀತೆ’ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದರು. ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು ಅಮೆರಿಕ ಭೇಟಿಯ ಕುರಿತು ’ಅಮೆರಿಕಾದಲ್ಲಿ ನಾನು ಮತ್ತು ಶಾಂತಿ’ ಎಂಬ ಪ್ರವಾಸ ಕಥನ ರಚಿಸಿದ್ದಾರೆ. ಅವರ ಕೆಲವು ಕೃತಿಗಳು- ಕನ್ನಡದಲ್ಲಿ ಭಾವಗೀತೆ, ಅಂಗುಲೀಮಾಲ, ಆಮ್ರಪಾಲಿ, ಖಲೀಲ್ ಗಿಬ್ರಾನ್, ಕಾವ್ಯಯೋಗ, ಅಮೆರಿಕದಲ್ಲಿ ನಾನು ಶಾಂತಿ, ನಿವೇದಿತಾ, ಜನ-ಮನ, ಚಿಂತೆ-ಚಿಂತನೆ, ಮಂದಹಾಸ ಮೀಮಾಂಸೆ ಇತ್ಯಾದಿ. ...
READ MORE