ಡಾ. ಲಕ್ಷ್ಮಣದಾಸ್

Author : ಗುಡಿಹಳ್ಳಿ ನಾಗರಾಜ

Pages 88

₹ 50.00




Year of Publication: 2012
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560046
Phone: 080-22107748

Synopsys

ಡಾ.ಲಕ್ಷ್ಮಣದಾಸ್‌ ರವರು ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಲೇ ಕಥಾ ಕೀರ್ತನಕಾರರಾಗಿ ಖ್ಯಾತರಾದವರು. ಕೇವಲ ಸಾಂಪ್ರದಾಯಿಕ ಕಥೆಗಳನ್ನಷ್ಟೇ ತಮ್ಮ ಕೀರ್ತನೆಗೆ ಬಳಸಿಕೊಳ್ಳದೆ ಸಮಕಾಲೀನ, ಸಾಮಾಜಿಕ ವಿಷಯಗಳನ್ನೂ ಓದುಗರ ಮನಮುಟ್ಟುವಂತೆ ರಚಿಸುತ್ತಾರೆ. ಸ್ವತಃ ರಂಗಕರ್ಮಿಯೂ ಆದ ಇವರು ಉತ್ತಮ ನಟರೂ ಹೌದು. ಲೇಖಕ “ಗುಡಿಹಳ್ಳಿ ನಾಗರಾಜ”ರವರು ಲಕ್ಷ್ಮಣದಾಸರ ಬದುಕಿನ ವಿವಿಧ ಘಟ್ಟಗಳ ವಿವರಗಳನ್ನು ಈ ಕೃತಿಯಲ್ಲಿ ನೀಡಿದ್ದಾರೆ.

About the Author

ಗುಡಿಹಳ್ಳಿ ನಾಗರಾಜ

ವೃತ್ತಿ, ಹವ್ಯಾಸಿ, ಗ್ರಾಮೀಣ ಸೇರಿದಂತೆ ಸಮಗ್ರ ರಂಗಭೂಮಿ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲವರು ಗುಡಿಹಳ್ಳಿ ನಾಗರಾಜ ಅವರು. ರಂಗಭೂಮಿ ಕುರಿತ ಇವರ ಬರಹಗಳು ರಂಗ ಇತಿಹಾಸದಲ್ಲಿ ಹೊಸ ಹಾದಿ ನಿರ್ಮಿಸಿವೆ. ಅಂತಹ ಹದಿನೈದಕ್ಕೂ ಹೆಚ್ಚು ರಂಗಕೃತಿ ರಚಿಸಿದ್ದಾರೆ. ರಂಗತಂಡಗಳ ರೂವಾರಿಯಾಗಿ ರಾಜ್ಯದ ನಾಲ್ಕಾರು ರಂಗತಂಡಗಳ ತೆರೆಯ ಹಿಂದಿನ ಶಕ್ತಿಯಾಗಿ ತೊಡಗಿಸಿಕೊಂಡಿದ್ದು- ಕಡೆಗಣಿಸಲ್ಪಟ್ಟ ನೂರಾರು ಕಲಾವಿದರನ್ನು ಬೆಳಕಿಗೆ ತಂದಿದ್ದಾರೆ. ಮುಖ್ಯವಾಹಿನಿಯಲ್ಲಿ ಅವಕಾಶ ಕಲ್ಪಿಸಿದ್ದಾರೆ. ದಾವಣಗೆರೆ (ಮತ್ತೆ ಈಗ ಬಳ್ಳಾರಿ) ಜಿಲ್ಲೆ ಹರಪನಹಳ್ಳಿ, ತಾಲ್ಲೂಕು ಗುಡಿಹಳ್ಳಿಯ ನಾಗರಾಜ ಅವರು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ.ಇಂಗ್ಲಿಷ್ ಪದವಿ ಪಡೆದು, ಹರಪನಹಳ್ಳಿಯಲ್ಲಿ ಮೂರು ವರ್ಷ (1980-83) ...

READ MORE

Related Books