ಪ್ರೊ.ಜೆ.ಆರ್‌.ಲಕ್ಷ್ಮಣರಾವ್

Author : ಟಿ.ಎ. ಬಾಲಕೃಷ್ಣ ಅಡಿಗ

Pages 64

₹ 60.00




Year of Publication: 2014
Published by: ಉದಯಭಾನು ಕಲಾಸಂಘ
Address: ಉದಯಭಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು- 560019
Phone: (080-26609343 / 26601831)

Synopsys

ಜಗಳೂರು ರಾಘವೇಂದ್ರರಾವ್ ಲಕ್ಷ್ಷಣರಾವ್ ಹಲವು ವರ್ಷಗಳ ಕಾಲ ರಸಾಯನ ವಿಜ್ಞಾನದ ಅಧ್ಯಾಪಕರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಶಾಖೆಯಿಂದ ಹೊರತಂದ ಇಂಗ್ಲಿಷ್ - ಕನ್ನಡ ನಿಘಂಟಿನ ಪ್ರಧಾನ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. 2016 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 'ಏನ್. ಸಿ. ಇ. ಆರ್. ಟಿ. ಪ್ರಶಸ್ತಿ', 1977 ರಲ್ಲಿ 'ಮೂಡುಬಿದರೆಯ ಡಾ. ಶಿವರಾಮ ಕಾರಂತ ಪ್ರತಿಷ್ಠಾನ್ ಪ್ರಶಸ್ತಿ' ಇವರಿಗೆ ಲಭಿಸಿದೆ. ಹೈಸ್ಕೂಲ್ ವಿದ್ಯಾರ್ಥಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು,'ಬಾಲ ವಿಜ್ಞಾನ ಮಾಸಿಕ ಪತ್ರಿಕೆ' ಆರಂಭಿಸಿದರು. ಪರಿಸರ ಹೋರಾಟ ಬರವಣಿಗೆಯಲ್ಲಿ ಸದಾ ಸಕ್ರಿಯರಾಗಿದ್ದರು.’ಆಹಾರ, ಪರಮಾಣು, ವಿಜ್ಞಾನ ವಿಚಾರ, ಲೂಯಿ ಪಾಸ್ಟರ್‌’ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.  ಇವರ ಪರಿಚಯವನ್ನು ಲೇಖಕರು ಈ ಕೃತಿಯ ಮೂಲಕ ಓದುಗರ ಮುಂದಿಟ್ಟಿದ್ದಾರೆ. 

About the Author

ಟಿ.ಎ. ಬಾಲಕೃಷ್ಣ ಅಡಿಗ

ಡಾ.ಬಿ.ಎ. ಬಾಲಕೃಷ್ಣ ಅಡಿಗ ವೃತ್ತಿಯಲ್ಲಿ ಜೀವಶಾಸ್ತ್ರ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಹವ್ಯಾಸಿ ಕನ್ನಡ ವಿಜ್ಞಾನ ಲೇಖಕರು. ಜೀವಶಾಸ್ತ್ರಕ್ಕೆ ಸಂಬಂಧಿಸಿದ ಇವರ ಅನೇಕ ಜನಪ್ರಿಯ ಲೇಖನಗಳು ಹಲವಾರು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. 40  ವರ್ಷಗಳ ಬೋಧನ ಅನುಭವ ಹೊಂದಿರುವ ಇವರು ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪದವಿ ಪೂರ್ವ ಶಿಕ್ಷಣದ ಪಠ್ಯಪುಸ್ತಕ ರಚನಾ ಸಮಿತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ 'ಜೀವಜಗತ್ತು ವಿಶ್ವಕೋಶ'ದ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರಿಂದ ರಚಿತವಾಗಿರುವ ಪ್ರಾಣಿಶಾಸ್ತ್ರ, 'ವೈಶಿಷ್ಟಮಯ ಜೀವಕೋಶ' ಎಂಬ ಪ್ರಸಿದ್ದ ಕೃತಿಗಳು ಹಲವಾರು ಮುದ್ರಣಗಳನ್ನು ಕಂಡಿವೆ. ಪ್ರಸ್ತುತ ಸಿಲಿಕಾನ್ ಸಿಟಿ ಅಕಾಡೆಮಿಯಲ್ಲಿ ಪ್ರಧಾನ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ...

READ MORE

Related Books