ಡಾ. ಶ್ರೀನಿವಾಸ ಹಾವನೂರು ಅವರು ರಚಿಸಿರುವ ಜೀವನ ಚರಿತ್ರೆ ‘ಡಾ.ಫರ್ಡಿನಾಂಡ್ ಕಿಟೆಲ್’ ಕನ್ನಡದ ಖ್ಯಾತನಾಮ ಕವಿ, ಕೋಶಕಾರ ಮತ್ತು ವಿದ್ವಾಂಸರು. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ರೆ.ಕಿಟೆಲ್ ಕರ್ನಾಟಕಕ್ಕೆ ಬಂದರು. ಆ ಅವಧಿಯಲ್ಲಿ ಭಾರತೀಯ ಪ್ರಾಚ್ಯ ಇತಿಹಾಸ, ಧರ್ಮ, ಭಾಷೆ, ಸಾಹಿತ್ಯ ಕ್ಷೇತ್ರಗಳಲ್ಲಿ ಯುರೋಪಿಯನ್ ವಿದ್ವಾಂಸರು ಗಣನೀಯ ಮಟ್ಟದಲ್ಲಿ ಕಸಿ ಮಾಡಿದ್ದರು. ದ್ರಾವಿಡ ಭಾಷಾ ವಿಚಾರವಾಗಿ ಕಾಲ್ಡ್ ವೆಲ್: ಶಾಸನ ಶೋಧದಲ್ಲಿ ಬರ್ಗೆಸ್, ಪ್ಲೀಟ್, ಹುಲ್ಷ್, ರೈಸ್ ರು, ಧಾರ್ಮಿಕ ಕ್ಷೇತ್ರದಲ್ಲಿ ಮ್ಯಾಕ್ಸ್ ಮುಲರ್, ಶಿಲ್ಪಕಲಾ ರಂಗದಲ್ಲಿ ಮೆಡೋಜ್-ಟೇಲರ್, ಕಸಿನ್ಸ್, ಫರ್ಗ್ಯೂಸನ್- ಮೊದಲಾದವರ ಕೊಡುಗೆಯಿಂದ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಸಮಗ್ರವಾಗಿ ರೂಪಿಸುವುದು ಸಾಧ್ಯವಾಯಿತು. ಡಾ.ಕಿಟೆಲ್ ಅವರೂ ಈ ವಿದ್ವತ್ಪ್ರಚಂಡರ ಸಾಲಿನಲ್ಲಿ ಗಣೆಸಲ್ಪಡುತ್ತಿದ್ದರು. ಇತ್ತ ಗುಂಡರ್ಟರು, ಬ್ರೌನರು ಮಲೆಯಾಳಿ, ತೆಲುಗು ಕೋಶಗಳನ್ನು ರಚಿಸಿದ್ದಾಗ, ಕಿಟೆಲರ ಕನ್ನಡ ಕೋಶವು ಹೊರಬಂದಿತು. ಮಾತ್ರವಲ್ಲ ವೈದುಷ್ಯದಲ್ಲಿ ಇವರುಗಳ ಕೃತಿಗಳಿಗಿಂತಲೂ ಮೇಲ್ಪಟ್ಟದ್ದೆನಿಸಿತು. ಪರಿಣಾಮವೆಂದರೆ ಕಿಟೆಲರ ಜೊತೆಗೆ ಕನ್ನಡಕ್ಕೂ ಹೆಚ್ಚಿನ ಮನ್ನಣೆ ದೊರೆಕಿತು. ಈ ಹಿನ್ನೆಲೆಯಲ್ಲಿ ಕಿಟೆಲರ ಜೀವನ ಸಾಧನೆಯನ್ನು ವಿವೇಚಿಸ ಬಯಸಿದೆ. ಇವರಿಗೆ ಹಿರಿಯಣ್ಣನಂತಿದ್ದ, ಅದೇ ಬಾಸೆಲ್ ಮಿಶನ್ನಿನ ಮೈವ್ ಗ್ಲಿಂಗ್ ಕನ್ನಡ ಪತ್ರಿಕೋದ್ಯಮ, ಗಾದೆಗಳ ಸಂಗ್ರಹ, ಪತ್ರ ಸಾಹಿತ್ಯ, ಲಿಪಿಸುಧಾರಣೆ, ಯಕ್ಷಗಾನ, ಹರಿದಾಸ ಸಾಹಿತ್ಯ-ಇವುಗಳನ್ನು ಮೊದಲ ಬಾರಿಗೆ ಕನ್ನಡದಲ್ಲಿ ಪ್ರಕಟಿಸಿದ್ದರು. ಅಂತಹ ಕಿಟೆಲ್ ಅವರ ಜೀವನ ಸಾಧನೆಯೊಂದಿಗೆ ಕನ್ನಡ ಸಾಹಿತ್ಯವಾಗಿ ಬೆಳೆದುಬಂದ ದಾರಿಯನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.