ಸಿದ್ಧನಾಥ ಬಳ್ಳಾರಿ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿದವರು. ಕನ್ನಡ ಮತ್ತು ಕನ್ನಡಿಗರ ಸೊಗಡನ್ನು ಹೊತ್ತ ಸೊಲ್ಲಾಪುರವು ಕರ್ನಾಟಕಕ್ಕೆ ಸೇರಬೇಕು ಎಂಬ ಧ್ವನಿಗೆ ಧ್ವನಿಗೂಡಿಸಿದರ ಜೊತೆಗೆ ಪ್ರಮುಖವಾಗಿ ದ್ವನಿ ಎತ್ತಿದವರು. ಮೂರ್ತರೂಪವಾಗಿದ್ದ ಇವರು ಮಹಾಜನ ವರದಿಯ ಅನುಷ್ಠಾನಕ್ಕಾಗಿಯೂ ಹೋರಾಟಕ್ಕೆ ದುಮುಕಿದವರು. ವೃತ್ತಿಯಲ್ಲಿ ವೈದ್ಯಾಧಿಕಾರಿಯಾದರೂ ಕೊಟ್ಟೂರನ್ನು ಕೇಂದ್ರವಾಗಿಸಿಕೊಂಡು ಗಾಂಧಿಯವರಿಂದ ಪ್ರಭಾವಗೊಂಡ ಇವರು ಸ್ವಾತಂತ್ರ್ಯ ಚಳುವಳಿಗೆ ಧುಮುಕಿ ಸೆರೆವಾಸ ಅನುಭವಿಸಿದ್ದಾರೆ. ಬಸವ ಜಯಂತಿ, ಅಕ್ಕನ ಜಯಂತಿ, ನಾಡಹಬ್ಬ ಮೊದಲಾದವುಗಳನ್ನು ಆಯೋಜಿಸಿ ಜನರನ್ನು ಏಕೀಕರಿಸಿ ಅವರಲ್ಲಿ ಕನ್ನಡತನವನ್ನು ಜಾಗೃತಗೊಳಿಸಲು ಶ್ರಮಪಟ್ಟ ಸಿದ್ಧನಾಥರ ಸ್ಫೂರ್ತಿದಾಯಕ ಜೀವನಗಾಥೆಯನ್ನು, ಜೀವನ ಸಾಧನೆಯನ್ನು ಶಂಕುಂತಲಾ ಎಂ. ಹೆಗಡೆಯವರು ಅಚ್ಚುಕಟ್ಟಾಗಿ ಈ ಕೃತಿಯಲ್ಲಿ ವಿವರಿಸಿದ್ದಾರೆ.