ಮನುಷ್ಯಕೇಂದ್ರಿತ ಧರ್ಮವನ್ನು, ದೇವರನ್ನು ಅನ್ವೇಷಣೆಗೊಳಪಡಿಸಿದ ವಿವೇಕಾನಂದರು ತಮ್ಮ ಚಿಂತನೆಗಳ ಮೂಲಕ ಭಾರತೀಯರ ವೈಚಾರಿಕತೆಯ ತಳಹದಿಗೆ ಭದ್ರವಾದ ಬುನಾದಿ ಹಾಕಿರುವರು. ಧರ್ಮದೊಂದಿಗೆ ತಳುಕುಹಾಕಿಕೊಂಡಿರುವ ಮತೀಯತೆಯನ್ನು ಕಟು ವಿಮರ್ಶೆಗೆ ಒಳಪಡಿಸಿ ಭಾರತೀಯತೆಯನ್ನು ಪ್ರತಿಪಾದಿಸಿದ ಶ್ರೇಷ್ಠ ಚಿಂತಕ ಸ್ವಾಮಿ ವಿವೇಕಾನಂದರು. ಆಧುನಿಕ ಜ್ಞಾನದ ಪ್ರಭೆ ಅವರ ಹಾದಿಯನ್ನು ನಿಚ್ಚಳವಾಗಿಸಿತ್ತು. ಯುವಕರ ಕುರಿತು ಅವರಿಗಿದ್ದ ನಂಬುಗೆಯ ಕಾರಣದಿಂದಲೇ ಯುವಶಕ್ತಿ ದೇಶದ ಸಂಪತ್ತು ಎಂದು ಭಾವಿಸಿದ್ದರು. ಧರ್ಮಕರ್ಮದ ಹಂಗಿನಿಂದ ಯುವಶಕ್ತಿ ಹೊರಬಂದು ಕತೃತ್ವಶಕ್ತಿಯಿಂದ ಸಮಾಜ, ದೇಶ ಕಟ್ಟಬೇಕು ಎಂಬ ಅವರ ಕರೆಗೆ ಯುವಕರು ಕಿವಿದೆರೆಯಬೇಕು ಎಂದಿದ್ದ ವಿವೇಕಾನಂದರ ಬದುಕು, ಸಾಧನೆಗಳ ಕುರಿತು ಎಂ.ಚಿನ್ನಸ್ವಾಮಿ ಸೋಸಲೆ ಅವರು ಈ ಕೃತಿಯನ್ನು ರಚಿಸಿದ್ದಾರೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಎನ್ ಚಿನ್ನಸ್ವಾಮಿ ಸೋಸಲೆ ಅವರು ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಸೋಸಲೆ ಗ್ರಾಮದವರು. 1968ರ ಮೇ 20 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣ ಸ್ವಗ್ರಾಮದಲ್ಲಿ ಮುಗಿಸಿ, ಪ್ರೌಢ ಶಿಕ್ಷಣದಿಂದ ಮುಂದಿನ ಓದು ಮೈಸೂರಿನಲ್ಲಿ ನಡೆಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ’ಆಧುನಿಕ ಮೈಸೂರು ಸಂಸ್ಥಾನದಲ್ಲಿ ಗ್ರಾಮೀಣಾಭಿವೃದ್ಧಿ( 1881-1940)’ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ (2001) ಪಡೆದರು. ನಮ್ಮ ಗ್ರಾಮಗಳು ಅಂದು ಇಂದು, ವಿಜಯನಗರ ಸಾಮ್ರಾಜ್ಯ ಮತ್ತು ಸಂಸ್ಥಾನ, ಭಾರತೀಯ ಸಮಾಜ ಮತ್ತು ದಲಿತರು, ಕರ್ನಾಟಕ ಚರಿತ್ರೆ ಮತ್ತು ಸಾಹಿತ್ಯ, ದಲಿತ ಚರಿತ್ರೆ ...
READ MORE