ಡಾ. ಶಿ.ಚ. ನಂದೀಮಠ

Author : ರಾಜಶೇಖರ ಇಚ್ಚಂಗಿ

Pages 112

₹ 75.00




Year of Publication: 2016
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ, ಕರ್ನಾಟಕ ಏಕೀಕರಣಕ್ಕಾಗಿ ದುಡಿದ ಸಮಾಜ ಚಿಂತಕ, ಮಾನವತಾವಾದಿ ಡಾ. ಶಿ.ಚ. ನಂದೀಮಠ ರವರು ಹಲವು ಶಕ್ತಿಗಳ ಸಂಗಮದಂತಿದ್ದವರು. ಇವರ ವಿದ್ವತ್ತು, ಪ್ರತಿಭೆ, ಪಾಂಡಿತ್ಯ ಅಪಾರವಾದುದು. ಇವರ ಜೀವನ ಮತ್ತು ಸಾಧನೆಯನ್ನು ಆಳವಾಗಿ ಅರಿತು, ಯುಕ್ತ ಶಬ್ಧಗಳಲ್ಲಿ ಲೇಖಕ ಡಾ. ರಾಜಶೇಖರ ಇಚ್ಚಂಗಿಯವರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಡಾ. ಶಿ.ಚ. ನಂದೀಮಠ ರವರ ಒಟ್ಟು ಬದುಕಿನ ವಿವರಗಳನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ರಾಜಶೇಖರ ಇಚ್ಚಂಗಿ

ಲೇಖಕ ರಾಜಶೇಖರ ಇಚ್ಚಂಗಿ ಅವರು ಗದಗ ಜಿಲ್ಲೆಯ ಬಟ್ಟೂರದವರು. ಅವರು 1957 ಜೂನ್‌ 01ರಂದು ಜನಿಸಿದರು. ಸ್ನಾತಕೋತ್ತರ ಪದವಿ ಪಡೆದಿರುವ ಇವರು ವೃತ್ತಿಯಿಂದ ಪ್ರಾಧ್ಯಾಪಕರು. ‘ಪಾರ್ಶ್ವನಾಥ ಪುರಾಣ-ಒಂದು ತೌಲನಿಕ ಅಧ್ಯಯನ’ ಮಹಾಪ್ರಬಂಧಕ್ಕೆ ಪಿಎಚ್‌.ಡಿ ಪದವಿ ಗಳಿಸಿದ್ದಾರೆ. ಕೃತಿಗಳು: ಚಿತ್ರ ಸಂಚಯ; ಬೆಟಗೇರಿ ಕೃಷ್ಣಶರ್ಮ, ಶಂಬಾಜೋಶಿ, ಅಣ್ಣಾ ಹಜಾರೆ, ಪಂಡಿತ ಸದಾಶಿವ ಶಾಸ್ತ್ರಿಗಳು- ವ್ಯಕ್ತಿ ಚಿತ್ರ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಕನ್ನಡ-ಕರ್ನಾಟಕ’, ‘ಕೆಲವು ಚಿಂತಕರು’ ಅವರ ವಿಮರ್ಶಾ ಕೃತಿಯಾಗಿದ್ದು ‘ಸಂಸ್ಕೃತಿ ಶೋಧ’ ಅವರ ಸಂಶೋಧನಾ ಕೃತಿ. ‘ಅಡವಿಸಿರಿ’, ‘ಹಿರಣ್ಯ ಗಂಗೋತ್ರಿ’, ‘ಅರ್ಪಣ’, ‘ಬೆಳಗಾವಿ ಬೆಡಗು’ ಅವರ ಸಂಪಾದಿತ ಕೃತಿಗಳು. ಬೆಳಗಾವಿ ಜಿಲ್ಲೆಯ ಸಾಂಸ್ಕೃತಿಕ ವೈವಿಧ್ಯ. ಅವರ ಮಹತ್ವದ ಕೃತಿ. ಅವರಿಗೆ ಕರ್ನಾಟಕ ಇತಿಹಾಸ ...

READ MORE

Related Books