ಭುವನದ ಭಾಗ್ಯವೆನಿಸುವ ಎಂ.ಎಸ್.ಸುಬ್ಬಲಕ್ಷ್ಮಿ ಅವರ ಸಂಗೀತ ಮತ್ತು ಬದುಕಿನ ಕುರಿತು ಡಾ.ಎನ್.ಜಗದೀಶ್ ಕೊಪ್ಪ ಅವರು ಬರೆದಿರುವ ಕೃತಿ.
ಜನಮಾನಸದಲ್ಲಿ ಬೆರೆತು ಹೋಗಿರುವ ಎಂ.ಎಸ್. ಸುಬ್ಬಲಕ್ಷ್ಮಿ ಅವರನ್ನು ಮತ್ತೆ ಮತ್ತೆ ಬರೆಯುವುದು ಎಲ್ಲಾ ಭಾಷೆಗಳ ಲೇಖಕರು ನಡೆಸುವ ಒಂದು ಸಾಂಸ್ಕೃತಿಕ ಅನುಸಂಧಾನ, ಈ ಕೃತಿ ಅಂಥದ್ದೊಂದು ಭಾವಪೂರ್ವ ಪ್ರಯತ್ನ ಎನ್ನುತ್ತಾರೆ ಲೇಖಕ ಜಗದೀಶ್ ಕೊಪ್ಪ. ದೇವದಾಸಿ ಮನೆತನದಲ್ಲಿ ಹುಟ್ಟಿದ ಹೆಣ್ಣು ಮಗಳೊಬ್ಬಳು ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ, ಸಂಗೀತ ಸಾಮ್ರಾಜ್ಞಿಯಾಗಿ ಬೆಳೆದು ಸಂಸ್ಕೃತಿಗೆ ಸಂಕೇತವಾಗಿ ಮಿನುಗಿದ ಅನುಪಮ ಕಥನವನ್ನು ಈ ಕೃತಿ ನಿರೂಪಿಸುತ್ತದೆ. ಇಲ್ಲಿ ಹೇಳಿರುವಂತೆ ಎಂ.ಎಸ್.ಸುಬ್ಬಲಕ್ಷ್ಮಿ ಎಂದರೆ ಜನಮನದೊಳಗೆ ನಿರಂತರ ಮೊಳಗುವ ಸುಪ್ರಭಾತವೆಂದು ಹೇಳಬಹುದು.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ 1956 ರಲ್ಲಿ ರೈತ ಕುಟುಂಬದಲ್ಲಿ ಜನನ. ಬೆಂಗಳೂರು ವಿ.ವಿ.ಪುರಂ ಕಾಲೇಜಿನಿಂದ ಬಿ.ಎ. ಪದವಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾನಿಯದಿಂದ ‘ ಜಾಗತೀಕರಣ ಮತ್ತು ಗ್ರಾಮ ಭಾರತ’ ಪೌಢಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. 1981 ರಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದ ಇವರು 2018 ರವರೆಗೆ ಹುಬ್ಬಳ್ಳಿ ನಗರದಲ್ಲಿ ಉದಯಟಿ.ವಿ.ಸಂಸ್ಥೆಯ ಉತ್ತರ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ನಗರದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. 1995 ರಲ್ಲಿ ಸುಮ್ಮಾನದ ಪದ್ಯಗಳು ಕೃತಿಯ ಮೂಲಕ ...
READ MORE