ಗಾಂಧೀವಾದದ ಕೊನೆಯಕೊಂಡಿ, ಮಾಜಿ ಸಚಿವ ಎಚ್. ಜಿ. ಗೋವಿಂದಗೌಡ ಅವರ ಬದುಕನ್ನು ಕುರಿತ ಚಿತ್ರ ಇದು. ಅವರು ಶಿಕ್ಷಣ ಸಚಿವರಾಗಿದ್ದಾಗ ಮಾಡಿದ ಅದೆಷ್ಟೋ ಪ್ರಯೋಗಗಳು ಇಂದು ಫಲ ನೀಡುತ್ತಿವೆ. ಗಾಂಧೀಜಿ ಅವರಿಂದ ಪ್ರೇರಿತರಾಗಿ ಸ್ವಾತಂತ್ಯ್ರ ಹೋರಾಟದಲ್ಲಿ ಪಾಲ್ಗೊಂಡ ಗೌಡರದು ಉದಾತ್ತ ವ್ಯಕ್ತಿತ್ವ ಉತ್ತಮ ಚಾರಿತ್ಯ್ರ. ಅವರ ಬದುಕೊಂದು ಸಮಾಜವಾದಿ ಅಧ್ಯಯನ ಕೂಡ. ಜೀವನಚಿತ್ರ ಮಾತ್ರವಲ್ಲದೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಬರೆದ ’ಗಾಂಧೀವಾದ’ ಲೇಖನ, ಡಾ. ಯು. ಆರ್. ಅನಂತಮೂರ್ತಿಯವರು ಬರೆದ ’ವರ್ತನೆಯ ಸಮಶ್ರುತಿ’ ಎಂಬ ಮುನ್ನುಡಿ ಕೂಡ ಇದೆ. ಗಿರೀಶ ಜಕಾಪುರೆ ಕೃತಿಯ ಕರ್ತೃ.
ಗಿರೀಶ್ ಚಂದ್ರಕಾಂತ ಜಕಾಪುರೆ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಶಿಕ್ಷಕರಾಗಿದ್ದಾರೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಮತ್ತು ಉರ್ದು ಭಾಷೆಯನ್ನು ಬಲ್ಲವರು. ಕಾವ್ಯ, ಕಥಾ ಸಂಕಲನ, ವ್ಯಕ್ತಿಚಿತ್ರ, ಮಕ್ಕಳ ಕಥೆ, ಕಾದಂಬರಿ, ಮಕ್ಕಳ ಪದ್ಯ, ಹಿಂದಿ ಅನುವಾದಗಳು, ಮರಾಠಿ ಕಥೆಗಳ, ಕಾದಂಬರಿಗಳ ಅನುವಾದ, ಪ್ರವಾಸ ಕಥನಗಳು, ಬಿಡಿ ಲೇಖನಗಳು, ಅನುವಾದಿತ ಕಾವ್ಯ ಹೀಗೆ ತಮ್ಮ ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಮುಖ ಕೃತಿಗಳು: ನನ್ನ ದನಿಗೆ ನಿನ್ನ ದನಿಯು, ಮನದ ಮುಂದಣ ಮಾಯೆ (ಗಜಲ್ ಗಳ ಸಂಕಲನ), ಖಾಮೋಶಿ, ಸಾಗರ್ ...
READ MOREಸಾವಿರದ ಶರಣು ಗೌರವ ಪ್ರಶಸ್ತಿ 2019