ಸೆಪ್ಟೆಂಬರ್ ೫

Author : ಶೀಲಾಕಾಂತ ಪತ್ತಾರ

Pages 132

₹ 130.00




Year of Publication: 2021
Published by: ಅಭಿನವ ಪ್ರಕಾಶನ
Address: 17/18-2,ಮೊದಲನೆ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 08023505825

Synopsys

ಸಾಹಿತಿ ಶೀಲಾಕಾಂತ ಪತ್ತಾರ ಅವರ ‘ಸೆಪ್ಟೆಂಬರ್ ೫’ ಕೃತಿಯು ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜೀವನ ಚರಿತ್ರಯಾಗಿದೆ. ಡಾ.ಗುರುಲಿಂಗ ಕಾಪಸೆ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದು, ‘ಬಹುದೊಡ್ಡ ವ್ಯಕ್ತಿತ್ವದ ಡಾ. ರಾಧಾಕೃಷ್ಣನ್ ಹೇಗೆ ಬೆಳೆದರು ಮತ್ತು ಹೇಗಿದ್ದರು-ಎಂಬುದನ್ನು ಸಾಧಾರಣವಾಗಿ ಚಿತ್ರಿಸುವ ಅವರ ಜೀವನ ಚರಿತ್ರೆ ಶ್ರೀ ಶೀಲಾಕಾಮತ ಪತ್ತಾರ ಅವರಿಂದ ರಚಿತವಾದುದರಲ್ಲಿ ಹಲವು ವೈಶಿಷ್ಟ್ಯಗಳಿರುವುದನ್ನು ಗಮನಿಸಬಹುದು:

1. ವ್ಯಾಪಕವಾದ ಅಧ್ಯಯಕ; ಆಧಾರಸಹಿತವಾದ ನಿರೂಪಣೆ 2. ಡಾ.ರಾಧಾಕೃಷ್ಣನ್ ವ್ಯಕ್ತಿತ್ವ ಮತ್ತು ತತ್ವಜ್ಞಾನದೊಂದಿಗೆ ಲೇಖಕ ಬೆಸೆದುಕೊಂಡಿರುವುದು

3. ಜೀವನದ ಒಂದೊಂದು ಘಟ್ಟವನ್ನು ವಾಸ್ತವಿಕತೆಯ ನೆಲೆಗಟ್ಟಿನ ಮೇಲೆ ಚಿತ್ರಿಸಿರುವುದು.

4. ಚರಿತ್ರೆ ವರದಿಯಾಗದಂತೆ ಎಚ್ಚರಿಕೆ ವಹಿಸಿರುವುದು.

5. ಸೂಕ್ತವಾದ ಭಾಷೆಯಲ್ಲಿ ಅಗತ್ಯವಿದ್ದಲ್ಲಿ ಧ್ವನಿಪೂರ್ಣವಾಗಿ ಪುನರ್ ಸೃಷ್ಟಿ ಮಾಡಿರುವುದು.

6. ಸನ್ನಿವೇಶ ಮತ್ತು ಸಂದರ್ಭಗಳನ್ನು ಕಣ್ಣಿಗೆ ಕಟ್ಟುವಂತೆ ಶಬ್ದಚಿತ್ರದಲ್ಲಿ ಹಿಡಿದಿಟ್ಟಿರುವುದು.

ಈ ಬಗೆಯ ವೈಶಿಷ್ಟ್ಯತೆಗಳಿಂದ ಇಡೀ ಜೀವನ ಚರಿತ್ರೆ ಸೃಜನಶೀಲವಾಗಿ , ಕಲಾತ್ಮಕವಾಗಿ ಓದುಗರ ಮನಸ್ಸನ್ನು ಸೆರೆ ಹಿಡಿದಿದೆ. ಇಡೀ ಜೀವನಚರಿತ್ರೆ ಒಮ್ಮೆ ಓದಿ ಇಟ್ಟುಬಿಡುವಂತಹದಾಗಿಲ್ಲ. ಮತ್ತೆ ಮತ್ತೆ ಓದುವಂತಹದು; ಮೆಲುಕು ಹಾಕುವಂತಹದು, ಕೃತಿ ರಚನೆಯಲ್ಲಿ ಕಂಡುಬರುವ ಲೇಖಕರ ಶ್ರದ್ಧೆ, ಅಧ್ಯಯನ, ಗಂಭೀರ ಚಿಂತನೆ, ಅಭಿವ್ಯಕ್ತಿಸುವ ರೀತಿ ಮುಂತಾದುವುಗಳು ಗಮನಾರ್ಹವಾಗಿದೆ ಎಂದಿದ್ದಾರೆ.

About the Author

ಶೀಲಾಕಾಂತ ಪತ್ತಾರ

ಬಾಗಲಕೋಟ ಜಿಲ್ಲೆಯ ಬಾದಾಮಿ ನಿವಾಸಿ ಆಗಿರುವ ಹಿರಿಯ ವಿದ್ವಾಂಸ ಡಾ. ಶೀಲಾಕಾಂತ ಪತ್ತಾರ ಅವರು ಮೂಲತಃ ಬಿಜಾಪುರ ಜಿಲ್ಲೆಯ ಸಿಂದಗಿಯವರು. 1947ರ ಅಕ್ಟೋಬರ್‌ 7ರಂದು ಜನಿಸಿದ ಅವರು ಎಂಎ, ಡಿ.ಲಿಟ್, ಬಿ.ಎಡ್ ಪದವೀಧರರು. ನಿವೃತ್ತ ಉಪನ್ಯಾಸಕರಾಗಿರುವ ಅವರು  ಡಾ. ರಾಧಾಕೃಷ್ಣನ್ ಅವರನ್ನು ಕುರಿತು ಜೀವನ ಚರಿತ್ರೆ ಪ್ರಕಟಿಸಿದ್ದಾರೆ. ಸಪ್ತಕ, ಕರ್ನಾಟಕದ ಸಾಂಪ್ರದಾಯಿಕ ಶಿಲ್ಪಕಲೆ (ಸಂಶೋಧನೆ) ಗ್ರಂಥಗಳನ್ನು ಪ್ರಕಟಿಸಿರುವ ಅವರ ’ಬಾದಾಮಿ: ಒಂದು ಸಾಂಸ್ಕೃತಿಕ ಅಧ್ಯಯನ’ ಮಹಾಪ್ರಬಂಧಕ್ಕೆ ಡಿ.ಲಿಟ್. ದೊರೆತಿದೆ. ಇದು ಸತ್ಯಾನ್ವೇಷಣೆ, ಕೃಷ್ಣಪ್ರಭೆ (ಸಂಪಾದಿತ) ಪ್ರಕಟಿತ ಕೃತಿಗಳು. ...

READ MORE

Related Books