ಸಾರೆ ಜಹಾಂ ಸೇ ಅಚ್ಛಾ ಹಿಂದೂಸ್ತಾನ್ ಹಮರಾ ಎಂಬ ಕವಿತೆಯನ್ನು ರಚಿಸಿದ ಅಲ್ಲಮ ಇಕ್ಬಾಲ್ ಅವರ ಬಗೆಗಿನ ಪುಸ್ತಕ. ಅಲ್ಲಮ ಇಕ್ಬಾಲ್ ಅವರು ನಿಷ್ಠಾವಂತ ದೇಶಾಭಿಮಾನಿ. ಜಾತೀಯ ಸಾಮರಸ್ಯದ ಪ್ರಬಲ ಪ್ರತಿಪಾದಕ, ಭಾರತೀಯ ಸಾಧುಸಂತರ ಮತ್ತು ಮೇಧಾವಿಗಳ ಮಹಾ ಶ್ಲಾಘನಕಾರ. ಭಾರತೀಯ ವಿಚಾರಧಾರೆಯನ್ನು , ತತ್ವಶಾಸ್ತ್ರವನ್ನು ಚೆನ್ನಾಗಿ ಮೈಗೂಡಿಸಿಕೊಂಡವರು. ಪರಕೀಯದ ದಾಸ್ಯದಿಂದ ಅವರ್ಣಿನೀಯವಾದ ವೇದನೆಯನ್ನು ಅನುಭವಿಸಿದವರು. ಪ್ರಾಶ್ಚಾತ್ಯ ಸಾಮ್ರಾಜ್ಯಶಾಹಿಯ ಪೊಳ್ಳು ಮತ್ತು ಮೋಹಕ ಘೋಷಣೆಗಳಿಂದ ಮೋಸ ಹೋಗಿದ್ದೇವೆ ಎಂಬುದನ್ನು ಭಾರತೀಯರು ಎಷ್ಟು ಬೇಗನೆ ಅರಿತರೆ ಅಷ್ಟು ಒಳ್ಳೆಯದೆಂದು ಅವರು ಉತ್ಕಟವಾಗಿ ಆಪೇಕ್ಷಿಸಿದ್ದರು. ಹೀಗೆ ಅಲ್ಲಮ ಇಕ್ಬಾಲ್ ಕುರಿತು ಈ ಕೃತಿಯಲ್ಲಿ ಬೆಳಕು ಚೆಲ್ಲಲಾಗಿದೆ.
ನ್ಯಾಯಾಧೀಶರಾಗಿ, ಸಾಹಿತಿಗಳಾಗಿ, ಚಳುವಳಿಕಾರರಾಗಿ ನಾಡುನುಡಿಗೆ ಸೇವೆ ಸಲ್ಲಿಸಿರುವ ಕೋ. ಚೆನ್ನಬಸಪ್ಪ ಅವರು ಬಳ್ಳಾರಿ ಜಿಲ್ಲೆಯವರು. ತಾಯಿ ಬಸಮ್ಮ- ತಂದೆ ವೀರಣ್ಣ. 1922ರ ಫೆಬ್ರುವರಿ 27ರಂದು ಜನಿಸಿದರು. ಕಾಲೇಜು ಶಿಕ್ಷಣವನ್ನು ಅನಂತಪುರದಲ್ಲಿ ಪಡೆಯುತ್ತಿದ್ದಾಗ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿ ಶಾಲೆಗೆ ತಿಲಾಂಜಲಿಯಿತ್ತರು. ಅನಂತರ ವಿದ್ಯಾಭ್ಯಾಸ ಮುಂದುವರಿಸಿ ಬಿ.ಎ. ಮತ್ತು ಲಾ ಪದವಿಯನ್ನೂ ಹಾಗೂ ಎಂ.ಎ. ಪದವಿಯನ್ನೂ ಗಳಿಸಿದರು. 1946ರಲ್ಲಿ ಬಳ್ಳಾರಿ ಜಿಲ್ಲೆಯ ಡಿಸ್ಟ್ರಿಕ್ಟ್ ಕೋರ್ಟಿನಲ್ಲಿ ವಕೀಲರಾಗಿ ವೃತ್ತಿಜೀವನ ಪ್ರಾರಂಭಿಸಿದ ಇವರು 1965ರಲ್ಲಿ ಡಿಸ್ಟ್ರಿಕ್ಟ್ ಸೆಷನ್ ಜಡ್ಜ್ ಆಗಿ ಅಮೂಲ್ಯ ಸೇವೆಸಲ್ಲಿಸಿದರು. ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಸಮಾಜಮುಖಿ ಸೇವೆ ...
READ MORE