2013ರಲ್ಲಿ ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ ಅಸ್ತಿತ್ವಕ್ಕೆ ಬಂದು ಮೂರು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿತು. ಆದರೆ ನಾಲ್ಕನೇ ಆವೃತ್ತಿಯ ವೇಳೆಗೆ ಸಾಹಿತ್ಯ ಸಂಭ್ರಮದ ರೂವಾರಿಗಳೂ ಆಗಿದ್ದ ಕಲಬುರ್ಗಿ ಅವರು ಹತ್ಯೆಗೀಡಾದರು. ಅವರು ಸಮ್ಮೇಳನಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುತ್ತ ಹೊರಬಂದ ಕೃತಿಯೇ ಕಲಬುರ್ಗಿ ನೆನಪು.ಶ್ಯಾಮಸುಂದರ ಬಿದರಕುಂದಿ ಕೃತಿಯ ಸಂಪಾದಕರು. ಸಾಹಿತ್ಯ ಸಂಭ್ರಮ ಟ್ರಸ್ಟ್ ಕೃತಿಯನ್ನು ಪ್ರಕಟಿಸಿದೆ.
ಕವಿ, ವಿಮರ್ಶಕ, ನಿವೃತ್ತ ಪ್ರಾಧ್ಯಾಪಕರಾಗಿರುವ ಡಾ. ಶ್ಯಾಮಸುಂದರ ಬಿದರಕುಂದಿ ಅವರು ಸದ್ಯ ಹುಬ್ಬಳ್ಳಿ ನಿವಾಸಿಯಾಗಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ., ಪಿಎಚ್.ಡಿ. ಪಡೆದಿರುವ ಅವರು ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷರಾಗಿದ್ದರು. ಕೃತಿಗಳು: ಅಜ್ಜಗಾವಲು, ಅಲ್ಲಮ ಪ್ರಭುವಾದ, ಬರುವುದೇನುಂಟೊಮ್ಮೆ, ತಲೆ ಎತ್ತಿ ಶರಣು (ಕವನ ಸಂಕಲನ), ಕೃತಿ ನೋಟ, ಅಚ್ಚು ಕಟ್ಟು, ನೆಲೆಗಟ್ಟು, ಪ್ರಸಂಗೋಚಿತ (ವಿಮರ್ಶೆ), ನವ್ಯಮಾರ್ಗದ ಕಾದಂಬರಿಗಳು (ಪಿಎಚ್.ಡಿ. ಮಹಾಪ್ರಬಂಧ), ಗಂಧಕೊರಡು, ಪ್ರಬಂಧಪ್ರಪಂಚ, ಸ್ವಾತಂತ್ರ್ಯದ ಸವಿನೀರು, ಕರ್ಕಿಯವರ ಸಮಗ್ರ ಸಾಹಿತ್ಯ ( ಸಂಪಾದಿತ), ಗರೂಡ ಶ್ರೀಪಾದರಾವ; ಶಂಕರ ಮೊಕಾಶಿ ಪುಣೇಕರ; ಫ.ಶಿ. ಭಾಂಡಗೆ (ಇತರೆ) ...
READ MORE