ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿ ಭಾರತೀಯರಿಗೆ ಸಂವಿಧಾನವೆಂಬ ವರವನ್ನು ಕುರುಣಿಸಿದ ಬಾಬಾ ಸಾಹೇಬ್ ಅಂಬೇಡ್ಕರನ್ನು ಪರಿಚಯಿಸುವ ಕೃತಿ ‘ಅಂಬೇಡ್ಕರ್ ಎಂಬ ಚೇತನ’. ಲೇಖಕರಾದ ಸಿದ್ದಲಿಂಗಯ್ಯನವರು ‘ಕೆಲವೇ ಪುಟಗಳಲ್ಲಿ ಅಂಬೇಡ್ಕರ್ ಅವರ ಜೀವಮಾನ ಸಾಧನೆ-ನಿಲುವು-ಕೊಡುಗೆ-ಬದುಕನ್ನು ತಮ್ಮ ಒಳನೋಟಕ್ಕೆ ತೆಗೆದುಕೊಂಡು ಸ್ಪುಟವಾಗಿ ಪರಿಚಯಿಸಿದ್ದಾರೆ. ಹಿಂದೂ ಮಹಿಳೆಯರ ಆಸ್ತಿಯ ಹಕ್ಕು, ವಿಚ್ಚೇದನ ಸ್ವಾತಂತ್ರ್ಯ ಮುಂತಾದ ಪ್ರಗತಿಪರ ಅಂಶಗಳನ್ನು ಇಲ್ಲಿ ಉಲ್ಲೇಖಿಸಿದ್ದಾರೆ.
ಅಂಬೇಡ್ಕರ್ ಎಂಬ ಚೇತನ
ಕನ್ನಡದ ಹಿರಿಯ ಲೇಖಕರಾದ ಸಿದ್ದಲಿಂಗಯ್ಯನವರು ಅಂಬೇಡ್ಕರ್ ಅವರ ಪರಿಚಯ ಮಾಡಿಕೊಡುವ ಈ ಪುಟ್ಟ ಪುಸ್ತಕ ಎಷ್ಟು ಅರ್ಥಪೂರ್ಣವಾಗಿದೆ ಎಂದರೆ, ಕೆಲವೇ ಪುಟಗಳಲ್ಲಿ ಅಂಬೇಡ್ಕರ್ ಅವರ ಜೀವನ ಸಾಧನೆಯನ್ನು ಸುಟವಾಗಿ, ಸಷವಾಗಿ ಪರಿಚಯ ಮಾಡಿಕೊಡುತ್ತದೆ. ಕಡಿಮೆ ವಾಕ್ಯಗಳಲ್ಲಿ ಮಹತ್ ಅನ್ನು ಹಿಡಿದಿಡುವ ಇಲ್ಲಿ ಪುಟಗಳನ್ನು ಓದುವುದೇ ಒಂದು ಅಪರೂಪದ ಅನುಭವ. 'ಭಾರತ ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಡಾ| ಅಂಬೇಡ್ಕರ್ ಅವರು ಮಾಡಿದ ಸೇವೆ ಅನುಪಮವಾದುದು. ಸಂವಿಧಾನ ಸಭೆಯಲ್ಲಿ ಸುಮಾರು 3 ಸಾವಿರ ಪ್ರಶ್ನೆ ಹಾಗೂ ತಿದ್ದುಪಡಿ, ಸೂಚನೆಗಳಿಗೆ ಡಾ| ಅಂಬೇಡ್ಕರ್ ಸಮರ್ಪಕವಾಗಿ ಉತ್ತರ ನೀಡುತ್ತಿದ್ದಾಗ ಅವರ ವಿದ್ವತ್ತಿನ ಪ್ರಖರತೆಯನ್ನು ಕಂಡು ದೇಶವೇ ಬೆರಗಾಯಿತು... ಹಿಂದೂ ಮಹಿಳೆ ಯರ ಆಸ್ತಿಯ ಹಕ್ಕು, ವಿಚ್ಚೇದನ ಸ್ವಾತಂತ್ರ್ಯ ಮುಂತಾದ ಪ್ರಗತಿಪರ ಅಂಶಗಳನ್ನು ಬೆಂಬಲಿಸಲು ದೇಶದ ಪ್ರಧಾನಿಯಾಗಲಿ, ರಾಷ್ಟ್ರಪತಿಯಾಗಲಿ, ಸಂಸತ್ತಾಗಲಿ ಮುಂದಾ ಗಲಿಲ್ಲ ಎಂಬುದು ವಿಷಾದದ ಸಂಗತಿ. ಇದರಿಂದ ನೊಂದ ಡಾ| ಅಂಬೇಡ್ಕರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಇತ್ತು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತರು'.
ಕೃಪೆ : ವಿಶ್ವವಾಣಿ 2020 ಜನವರಿ 05
©2024 Book Brahma Private Limited.