‘ಸ್ವಾಮಿ ವಿವೇಕಾನಂದ’ ಸಿವಿಜಿ ಪಬ್ಲಿಕೇಷನ್ಸ್ ನ ಜೀವನ ಚರಿತ್ರೆ ಮಾಲೆಯಲ್ಲಿ ಪ್ರಕಟವಾದ ಕೃತಿ. ಸ್ವಾಮಿ ವಿವೇಕಾನಂದರನ್ನು ರಾಷ್ಟ್ರಕವಿ ಕುವೆಂಪು ಅವರು ನವ ಯುಗಾಚಾರ್ಯ ಎಂದು ಕರೆದರು. ನವ ತರುಣರಿಗೆ ವಿವೇಕಾನಂದರು ಒಬ್ಬ ಸೂರ್ತಿಜೀವವಾಗಿದ್ದರು. ಭಾರತಕ್ಕೆ ಮಂಕು ಕವಿದಿದ್ದ ದಿನಗಳಲ್ಲಿ ವಿವೇಕಾನಂದರು ಅವತರಿಸಿ ಭಾರತದ ಹಿರಿಮೆಯನ್ನು ದೇಶ ವಿದೇಶಗಳಲ್ಲಿ ಸಾರಿ ಭಾರತಕ್ಕೆ ವಿಶಿಷ್ಟ ಸ್ಥಾನವನ್ನು ತಂದುಕೊಟ್ಟರು. 1893ರಲ್ಲಿ ಚಿಕಾಗೊದಲ್ಲಿ ನಡೆದ ಭರ್ಮ ಸಂಸತ್ತಿನಲ್ಲಿ ಅವರು ಮಾಡಿದ ಭಾಷಣ ಜಗದ್ವಿಖ್ಯಾತವಾಯಿತು. ನಭೂತೋನಭವಿಷ್ಯತಿ ಎಂಬಂತೆ ಇಂದಿಗೂ ಆ ಭಾಷಣ ಮಿಲಿಯ ಮಿಲಿಯ ಜನರನ್ನು ಆಕರ್ಷಿಸುತ್ತಿದೆ.
ತಮ್ಮ ಗುರುಗಳಾದ ಶ್ರೀ ರಾಮಕೃಷ್ಣ ಪರಮಹಂಸರ ಧೈಯೋದ್ದೇಶಗಳನ್ನು ಪೂರೈಸಲು ರಾಮಕೃಷ್ಣ ಮಿಷನ್ ಸ್ಥಾಪಿಸಿದರು. ಬದುಕಿದ್ದು ಕಡಿಮೆ, ಸಾಧಿಸಿದ್ದು ಬಹಳ, ವಿವೇಕಾನಂದರ ಜೀವನ ಸಾಧನೆ ಕುರಿತು ತಿಳಿಯುವುದು ಒಂದು ಸ್ಫೂರ್ತಿದಾಯಕ ಸಂಗತಿ 'ಏಳಿ ಎದ್ದೇಳಿ! ಗುರಿ ಮುಟ್ಟುವವರೆಗೂ ನಿಲ್ಲದಿರಿ' ಎಂದು ಯುವಕರನ್ನು ಹುರಿದುಂಬಿಸಿದವರು ವಿವೇಕಾನಂದರು. ಕಾರ್ಯ ಶೀಲರಾಗಿರಿ ಉಳಿದವು ತಾವಾಗಿಯೇ ಬರುತ್ತವೆ ಎಂದು ಉತ್ತೇಜಿಸಿದರು. ವಿವೇಕಾನಂದರಿಗೆ ಒಳ್ಳೆ ವಾಕ್‌ಶಕ್ತಿ ಇತ್ತು. ಅದೊಂದು ಅವರ ಅದ್ಭುತ ಸಾಮರ್ಥ್ಯ, ಇದಕ್ಕೆ ಅವರ ಚಿಕಾಗೊ ಭಾಷಣವೇ ಒಂದು ಉದಾಹರಣೆ. ಸ್ವಾಮಿ ವಿವೇಕಾನಂದರ ಜೀವನ ಸಾಧನೆ ಕುರಿತು ಈ ಕೃತಿಯನ್ನು ಚಿತ್ರಗಳೊಂದಿಗೆ ಆಕರ್ಷಕವಾಗಿ ಪ್ರಕಟಿಸಿದ್ದಾರೆ.
©2024 Book Brahma Private Limited.