ಡಾ.ಸುಲೋಚನಾ ಗುಣಶೀಲ

Author : ವೈ.ಸಿ. ಕಮಲ

Pages 88

₹ 45.00




Year of Publication: 2012
Published by: ಉದಯಭಾನು ಕಲಾಸಂಘ
Address: ಉದಯಭಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು- 560019
Phone: (080-26609343 / 26601831)

Synopsys

ಡಾ. ಸುಲೋಚನಾ ಗುಣಶೀಲ ಬಸವಣಗುಡಿಯ ಗುಣಶೀಲ ಆಸ್ಪತ್ರೆಯ ಸ್ಥಾಪಕಿ. 1988ರಲ್ಲಿ ಗುಣಶೀಲ ಆಸ್ಪತ್ರೆಯಲ್ಲಿ ದಕ್ಷಿಣ ಭಾರತದ ಮೊದಲ ಪ್ರನಾಳ ಶಿಶು ಜನನವಾಯಿತು. ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ಇವರು, 5 ಚಿನ್ನದ ಪದಕ ಪಡೆದಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಮಹತ್ತರ ಸೇವೆಗಾಗಿ 1990ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಭಾರತೀಯ ವೈದ್ಯಕೀಯ ಸಂಘದ ಡಾ.ಬಿ.ಸಿ.ರಾಯ್ ಪ್ರಶಸ್ತಿ, ಕೃತಕ ಗರ್ಭದಾರಣೆ ಚಿಕಿತ್ಸೆಯಲ್ಲಿನ ಸಾಧನೆಗಾಗಿ 2004ರಲ್ಲಿ ಐಎಸ್‌ಎಆರ್‌ ಪ್ರಶಸ್ತಿ ದೊರೆತಿದೆ.  ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕೃತಕ ಗರ್ಭಧಾರಣೆ ಚಿಕಿತ್ಸೆಯನ್ನು ಪರಿಚಯಿಸಿದ ಸುಲೋಚನಾ ಗುಣಶೀಲ ಅವರ ಜೀವನದ ವ್ಯಕ್ತಿಚಿತ್ರವನ್ನು ಲೇಖಕರು ಚಿತ್ರಿಸಿದ್ದಾರೆ. 

About the Author

ವೈ.ಸಿ. ಕಮಲ
(01 March 1967)

ಡಾ.ವೈ.ಸಿ. ಕಮಲ ಡಾ. ವೈ.ಸಿ. ಕಮಲ ಅವರು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಪದವಿ ಕಾಲೇಜಿನಲ್ಲಿ ಭೌತಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ. ತುಮಕೂರಿನ ನಾಗವಲ್ಲಿಯಲ್ಲಿ 1967 ಮಾರ್ಚ್ 1 ರಂದು ಜನಿಸಿದರು.  ಇದರ ಜೊತೆಗೆ ಸಂಶೋಧನೆ ಹಾಗೂ ಕನ್ನಡ ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ಭಾರತದಲ್ಲಿ ಆಧುನಿಕ ಭೌತಶಾಸ್ತ್ರದ ಬೆಳವಣಿಗೆಯ ಆರಂಭಿಕ ಹಂತ-ಒಂದು ವಿಶ್ಲೇಷಣೆ' ಎಂಬ ಪ್ರೌಢ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ದೇಶದ ಆಕಾಶವಾಣಿ ಅರ್‍ಕೈವ್ಸ್‌ಗಾಗಿ ಜಾನಪದ ವೃತ್ತಿ ಗಾಯಕರ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಅನೇಕ ರೂಪ ನಾಟಕಗಳನ್ನು ನಡೆಸಿ ಆಕಾಶವಾಣಿಯ ಮೂಲಕ ಪ್ರಸಾರ ಮಾಡಿದ್ದಾರೆ. ...

READ MORE

Related Books