ಪ್ರೊ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ- ನಾಡಿನ ಪ್ರಸಿದ್ಧ ಕವಿಗಳಾಗಿ ಬೆಳೆದಿರುವ ಪ್ರೊ.ಎನ್.ಎಸ್.ಲಕ್ಷ್ಮೀನಾರಾಯಣಭಟ್ಟರು ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ, ಲೇಖಕರಾಗಿ ಗುರುತಿಸಿಕೊಂಡವರು. ಶ್ರೇಷ್ಠ ಪ್ರಾಧ್ಯಾಪಕರಾದ ಎನ್.ಎಸ್.ಎಲ್ ಅವರು ಛಂದಸ್ಸಿನ ಪಾಠ ಹೇಳುವಲ್ಲಿ ವಿದ್ಯಾರ್ಥಿಗಳಿಗೆ ಪ್ರಿಯವಾದ ಮೇಷ್ಟ್ರು. ಛಂದಸ್ಸಿನ ಪದ್ಯಗಳ ಲಯ ಹೇಳಿ ಅದನ್ನು ಬಿಡಿಸಿ ಹೇಳುವ ಅವರ ಹಾವ-ಭಾವಗಳಲ್ಲಿಯೇ ಆ ಪಠ್ಯ ಅರ್ಥವಾಗಿ ವಿದ್ಯಾರ್ಥಿಗಳ ನೆನಪಿನಂಗಳದಲ್ಲಿ ಮನೆಮಾಡಿ ಬಿಡುತ್ತಿತ್ತು. ಇಂತಹ ಆಕರ್ಷಣೆ ಅವರ ಪಾಠದ ವೈಖರಿಯಾಗಿತ್ತು. ಅನೇಕ ಗಂಭೀರ ಕೃತಿಗಳನ್ನು ಪ್ರಕಟಿಸಿರುವ ಎನ್.ಎಸ್.ಎಲ್ ರವರು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ಕುರಿತಾದ ಈ ಕಿರುಹೊತ್ತಿಗೆಯನ್ನು ಎಚ್. ನಾರಾಯಣಸ್ವಾಮಿಯವರು ರಚಿಸಿದ್ದಾರೆ.
ಲೇಖಕ ಎಚ್. ಲಕ್ಷ್ಮೀನಾರಾಯಣ ಸ್ವಾಮಿ ಅವರು (1987) ಬೆಂಗಳೂರಿನವರು. ಬೆಂಗಳೂರು ವಿ.ವಿ ಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸ್ನಾತಕೋತ್ತರ ಪದವೀಧರರು. ಸದ್ಯ, ಅದೇ ಕೇಂದ್ರದಲ್ಲಿ ಹಿರಿಯ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಕೃತಿಗಳು: ಗೆಳತಿ ಮತ್ತೊಮ್ಮೆ ಯೋಚಿಸು, ಮುಟ್ಟಿನ ನೆತ್ತರಲ್ಲಿ’, ಉರಿವ ಕೆಂಡದ ಸೆರಗು (ಕವನ ಸಂಕಲನಗಳು), ಜಾಲಿಮರದ ಜೋಳಿಗೆಯಲ್ಲಿ ಎಂಬ ಖಂಡಕಾವ್ಯ ಕೃತಿ, ಇವರ ‘ತೊಗಲ ಚೀಲದ ಕರ್ಣ’ ಕೃತಿಗೆ 2017 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಲಭಿಸಿದೆ.ತೊಗಲ ಚೀಲದ ಕರ್ಣ, ಸಾಣೆಗಲ್ಲು, ಬಹುಪರಾಕಿನ ಸಂತೆಯೊಳಗೆ (ವಿಮರ್ಶಾ ಕೃತಿ) ಡಾ. ಎಸ್ ಎನ್ ಲಕ್ಷ್ಮೀನಾರಾಯಣ ಭಟ್ಟರ ಕುರಿತ ಕಿರು ಹೊತ್ತಿಗೆ ಪ್ರಕಟಿಸಿದ್ದಾರೆ. ಬೆಂಗಳೂರು ಸಾರಿಗೆ ಸಂಸ್ಥೆ ನೀಡುವ ...
READ MORE