ವಿಜಯಪುರ ಪ್ರಾದೇಶಿಕ ಪದಕೋಶ

Author : ಪೂರ್ಣಿಮಾ ದ್ಯಾಮಣ್ಣವರ

Pages 84

₹ 150.00




Year of Publication: 2020
Published by: ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ
Address: ಡೊಂಗರಗಾಂವ, ತಾಲೂಕು ಕಮಲಾಪುರ, ಜಿಲ್ಲೆ ಕಲಬುರಗಿ

Synopsys

ಲೇಖಕಿ ಡಾ. ಪೂರ್ಣಿಮಾ ದಾಮಣ್ಣನವರ್ ಅವರ ಸಂಶೋಧನಾ ಕೃತಿ-ವಿಜಯಪುರ ಪ್ರಾದೇಶಿಕ ಪದಕೋಶ. ಒಟ್ಟು 15 ಲೇಖನಗಳಿವೆ. ವಿಜಯಪುರ ಪ್ರದೇಶದ ಭಾಗದ ಭಾಷಾ ವೈವಿಧ್ಯತೆಯನ್ನು, ವೈಶಿಷ್ಟತೆಯನ್ನು,ಗುರುತಿಸುವ ಪ್ರಯತ್ನ.ವಾಕ್ಯ,ಸಂಭಾಷಣೆಗಳು, ನುಡಿಗಟ್ಟುಗಳು, ನುಡಿಗಟ್ಟುಗಳು, ಜೋಡುನುಡಿ, ಸಾಮಾಜಿಕ ಪ್ರಭೇದಗಳು,ಸ್ಥಳನಾಮಗಳು ಇತ್ಯಾದಿ ಕುರಿತ ಲೇಖನಗಳಿವೆ. ಪ್ರಾದೇಶಿಕ ಭಾಷಾ ಸೊಗಡನ್ನು ಗುರುತಿಸಲಾಗಿದೆ. ಈ ಕೃತಿಯಲ್ಲಿ ವಿಜಯಪುರ ಕನ್ನಡದ ವ್ಯಾಕರಣಾಂಶಗಳ ವಿಶ್ಲೇಷಣೆ, ವಿಶಿಷ್ಟ ಪದಗಳ ಬಳಕೆ,ಮರಾಠಿ, ಉರ್ದು ಸ್ವೀಕರಣ, ವಿಜಯಪುರ ಕನ್ನಡಕ್ಕೆ ಮಾತ್ರ ವಿಶಿಷ್ಟವಾಗಿರುವ ಪ್ರತ್ಯಯಗಳನ್ನು ಹೇಳಿರುವುದು ಈ ಕೃತಿಯ ಮೌಲ್ಯ ಹೆಚ್ಚಿಸಿದೆ. ವಿಜಯಪುರ ಭಾಷೆಗೆ ಮಾತ್ರ ವಿಶಿಷ್ಟ ಪದಪ್ರಯೋಗಗಳಿವೆ. ಉದಾಹರಣೆಗಾಗಿ ಹಾನ, ಹಾರ, ಹಾಳ, ಇತ್ಯಾದಿ.

ವಿಜಯಪುರ ಕನ್ನಡದ ಇನ್ನೊಂದು ವಿಶೇಷವೆಂದರೆ ಸಂಖ್ಯಾವಾಚಕ ಸಮಯವಾಚಿಗಳನ್ನು ಮರಾಠಿಯಿಂದ ಸ್ವೀಕರಿಸುವುದು. ಉದಾಹರಣೆಗೆ -ಪನ್ನಾಸ್(ಐವತ್ತು) ಶಂಬೊರು(ನೂರು )ಸಾಟಿ (ಅರವತ್ತು ) ಅಲ್ಲದೆ ವ್ಯಾಪಾರದಲ್ಲಿ ಹಾಗೂ ದೈನಂದಿನ ವ್ಯವಹಾರದಲ್ಲಿಯೂ ಕೂಡ ಮರಾಠಿ ಪ್ರಭಾವವಿದೆ. ವಿಜಯಪುರ ಗ್ರಾಮೀಣ ಭಾಗದಲ್ಲಿ ಕ್ಷೇತ್ರಕಾರ್ಯ ಮಾಡಿ ಹಳ್ಳಿ ಹಳ್ಳಿಗೆ ಭೇಟಿ ನೀಡಿ ಅಲ್ಲಿನ ಆಡುನುಡಿಯನ್ನು ಸೂಕ್ಷ್ಮವಾಗಿ ಗಮನಿಸಿ, ವಿಜಯಪುರ ಕನ್ನಡದ ಸಾಮಾಜಿಕ ಉಪಭಾಷೆಗಳು ವರ್ಗೀಕರಿಸಿದ್ದಾರೆ. ಬ್ರಾಹ್ಮಣರ ಕನ್ನಡ :ತಂಬಿಗೆ, ಬಕ್ರಿ, ಝನಕ,ಲಿಂಗಾಯಿತರ ಕನ್ನಡ: ಅಕ್ಕದ,ಹೊಕ್ಕದ, ಐತಿ ಇತ್ಯಾದಿ. ಸ್ಥಳನಾಮಗಳಲ್ಲಿ ಕೂಡ ವಿಜಯಪುರ ಭಾಷೆಯ ಪ್ರಾದೇಶಿಕತೆ ಅಡಕವಾಗಿದೆ. ಕೆಲ ವಿದ್ವಾಂಸರು ಕನ್ನಡದಲ್ಲಿ ಮಹಾಪ್ರಾಣಗಳು ಇಲ್ಲವೆಂದು ಹೇಳುತ್ತಾರೆ. ಅದರೆ, ವಿಜಯಪುರದಲ್ಲಿ ನಿತ್ಯಬಳಕೆಯ ಪದಗಳಲ್ಲಿ ಮಹಾಪ್ರಾಣಗಳನ್ನು ಹೆಚ್ಚಾಗಿ ಕಾಣಬಹುದು. ಉದಾ- ಖಾರ, ಝಳಕಾ, ಛಪ್ಪರ, ಸ್ಥಳನಾಮಗಳಲ್ಲಿ ಅಗರಖೇಡ್, ಮಲಘಾಣ, ಮುಂತಾದವುಗಳನ್ನು ಗಮನಿಸಬಹುದು.

About the Author

ಪೂರ್ಣಿಮಾ ದ್ಯಾಮಣ್ಣವರ

ಲೇಖಕಿ ಡಾ. ಪೂರ್ಣಿಮಾ ದ್ಯಾಮಣ್ಣವರ ಅವರು ಮೂಲತಃ ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದವರು.  ತಂದೆ- ಕೃಷ್ಣಪ್ಪಾ, ತಾಯಿ-ಸರೋಜಿನಿ. ವಿಜಾಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ "ವಿಜಯಪುರ ಕನ್ನಡ: ಭಾಷಾ ವೈಜ್ಞಾನಿಕ ಅಧ್ಯಯನ"  ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.  ಬ್ಯಾಂಕಾಕ್ ನಲ್ಲಿ ಜರುಗಿದ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ "A dialect survey of Bijapur district" ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧ  ಮಂಡಿಸಿದ್ದಾರೆ. ಪ್ರಸ್ತುತ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ  ಡಾ, ಫ ಗು ಹಳಕಟ್ಟಿ ಸ್ನಾತಕೋತ್ತರ ಕೇಂದ್ರ ವಿಜಯಪುರದಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ.  ಕೃತಿಗಳು: ವಿಜಯಪುರ ಕನ್ನಡ: ಭಾಷಾ ವೈಜ್ಞಾನಿಕ ಅಧ್ಯಯನ ...

READ MORE

Related Books