ಲೇಖಕಿ ಡಾ. ಪೂರ್ಣಿಮಾ ದ್ಯಾಮಣ್ಣವರ ಅವರು ಮೂಲತಃ ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದವರು. ತಂದೆ- ಕೃಷ್ಣಪ್ಪಾ, ತಾಯಿ-ಸರೋಜಿನಿ. ವಿಜಾಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ "ವಿಜಯಪುರ ಕನ್ನಡ: ಭಾಷಾ ವೈಜ್ಞಾನಿಕ ಅಧ್ಯಯನ" ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬ್ಯಾಂಕಾಕ್ ನಲ್ಲಿ ಜರುಗಿದ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ "A dialect survey of Bijapur district" ಎಂಬ ವಿಷಯದ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಪ್ರಸ್ತುತ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಡಾ, ಫ ಗು ಹಳಕಟ್ಟಿ ಸ್ನಾತಕೋತ್ತರ ಕೇಂದ್ರ ವಿಜಯಪುರದಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ.
ಕೃತಿಗಳು: ವಿಜಯಪುರ ಕನ್ನಡ: ಭಾಷಾ ವೈಜ್ಞಾನಿಕ ಅಧ್ಯಯನ ( 15 ಲೇಖನಗಳ ಸಂಗ್ರಹ)