ಟೀಕೆ ಟಿಪ್ಪಣಿ- ಸಂಪುಟ-2 ಲಂಕೇಶ್ ಅವರ ಅಂಕಣಗಳ ಸಂಕಲನದ ಎರಡನೇ ಭಾಗ. ಅವರೇ ಹೇಳುವಂತೆ ಅಂಕಣ ಬರೆಯುವವ ಅಮರತ್ವದ ಜೊತೆಗೆ ಹುಡುಗಾಟ ಆಡುವವ. ಆತ ತನ್ನ ಸುತ್ತಣ ಬದುಕನ್ನು ಕಂಡು ಹುಮ್ಮಸ್ಸು ಗೊಂಡು ಬರೆಯುತ್ತಾನೆ; ಈ ಹುಮಸ್ಸನ್ನು “ಸ್ಪೂರ್ತಿ' ಅನ್ನುವುದಕ್ಕೆ ಕೂಡ ಹಿಂಜರಿಯು ತಾನೆ. ಬುದಿಜೀವಿಯಂತೆ ಸಂಕೀರ್ಣವಾಗಿ ಬರೆಯುವುದಾಗಲಿ, ಕವಿಯಂತೆ ಭವಿಷ್ಯದ ಜನಾಂಗಕ್ಕೆ ಬರೆಯುವುದಾಗಲಿ ಅಂಕಣ ಕಾರನಿಗೆ ಸಾಧ್ಯವಾಗುವುದಿಲ್ಲ; ಇವತ್ತಿನ ಭಾಷೆಯಲ್ಲಿ ಬರೆದು ಓದುಗರ ಆಸಕ್ತಿ ಕೆರಳಿಸದಿದ್ದರೆ ಎಲ್ಲ ವ್ಯರ್ಥವಾಗುತ್ತದೆ. ಅಂಕಣದ ಆರಂಭದಲ್ಲಿ ಅನ್ವೇಷಣೆಯಾದದ್ದು ಕ್ರಮೇಣ ಅಂಕಣಕಾರನ ಶೈಲಿಯಾದಾಗಲೂ ಜೀವಂತಿಕೆಯನ್ನು ಕಾಪಾಡಿಕೊಳ್ಳಬೇಕಾಗು ತದೆ. ಈ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದವನು ಉತ್ತಮ ಕತೆ, ಕಾದಂಬರಿ ಕಾರರಷ್ಟೇ ಅರ್ಥಪೂರ್ಣವಾಗುತ್ತಾನೆ. ಅಂಕಣದ ಬಗೆಗಿನ ನನ್ನ ವಿಶ್ವಾಸವನ್ನು ದೃಢಗೊಳಿಸಿದ್ದು 1991 ರಲ್ಲಿ ಪ್ರಕಟವಾದ ಟೀಕೆ ಟಿಪ್ಪಣಿ'ಯ ಸಂಪುಟ. ಇದು ಪ್ರಕಟವಾಗುವುದಕ್ಕೆ ಸುಮಾರು ಹತ್ತು ವರ್ಷದ ಹಿಂದೆ ಬರೆದಿದ್ದ ಲೇಖನಗಳು ಜನರ ಆಸಕ್ತಿ ಕಾಪಾಡಿಕೊಳ್ಳುತ್ತಾ ಹೋದವು. ಇದನ್ನು ನಾನು ಜನರ ಅಭಿಪ್ರಾಯ ಕೇಳಿ ಮಾತ್ರ ಹೇಳುತ್ತಿಲ್ಲ, ನಾನೇ ಓದುಗನಾಗಿ ಮತ್ತೆ ಓದಿ ಹೇಳುತ್ತಿದ್ದೇನೆ ಎನ್ನುತ್ತಾರೆ. ಟೀಕೆ ಟಿಪ್ಪಣಿ ಅಂಕಣದಲ್ಲಿ ರಾಜಕೀಯ, ಕ್ರೀಡೆ, ಸಮಾಜದ ಹಲವು ತಲ್ಲಣಗಳಿಗೆ ಸ್ಪಂದಿಸುತ್ತಿದ್ದ ಲೇಖಕ ಲಂಕೇಶ್ ಅವರ ಸಮಗ್ರನೋಟ ಈ ಸಂಪುಟಗಳಲ್ಲಿ ಕಾಣಸಿಗುತ್ತವೆ.
©2024 Book Brahma Private Limited.