‘ಸುದ್ದಿಯೇ ಸಾಹಿತ್ಯ’ ಡಾ.ಸಿ. ನಾಗಣ್ಣ ಅವರ ಅಂಕಣ ಬರಹಗಳ ಸಂಕಲನ. ಈ ಕೃತಿಗೆ ಕವಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಬೆನ್ನುಡಿಯ ಮಾತುಗಳಿವೆ. ಪ್ರತಿಭೆ ಮತ್ತು ಶ್ರಮ ಮೇಳೈಸಿದಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ. ಇಂಗ್ಲೀಷ್ ಮತ್ತು ಆಫ್ರಿಕನ್ ಸಾಹಿತ್ಯದಲ್ಲಿ ಪರಿಣತಿ ಹೊಂದಿರುವ ಇವರು ಕೈಚಾಚದ ಜ್ಞಾನ ಕ್ಷೇತ್ರಗಳಿಲ್ಲ. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಳ ಮೇಲೆ ಅಸದೃಶ್ಯ ಹಿಡಿತ ಸಾಧಿಸಿರುವ ಕೆಲವೇ ವಿದ್ವಾಂಸರಲ್ಲಿ ಡಾ. ನಾಗಣ್ಣ ಒಬ್ಬರು ಎಂಬುದು ನನ್ನ ಖಚಿತವಾದ ನಂಬುಗೆ, ಯಾವುದೇ ವಿಷಯದ ಮೇಲೆ ಸ್ವಾರಸ್ಯಕರವಾಗಿ ಮಾತನಾಡಬಲ್ಲ ಇವರು ಸುದ್ದಿಗಳ ಸುತ್ತಲೇ ಸಾಹಿತ್ಯ ರಚಿಸಿದ್ದಾರೆ. ರಾಜಕೀಯ, ಶಿಕ್ಷಣ, ಸಂಸ್ಕೃತಿ, ಕ್ರೀಡೆ, ಮಹಿಳೆ, ಪ್ರಯಾಣ ಹೀಗೆ ವಿಷಯಗಳ ಹರವು ಆಸಕ್ತಿ ಹುಟ್ಟಿಸುತ್ತದೆ. ಅಲ್ಲಲ್ಲಿ ಕಾಣಬರುವ ದೃಷ್ಟಾಂತಗಳು ಇವರ ಓದಿನ ವಿಸ್ತಾರವನ್ನು ಹೇಳುತ್ತದೆ. ಹೊಸ ಪದಗಳನ್ನು ಟಂಕಿಸುವುದರಲ್ಲಿಯೂ ಇವರು ಜಾಣರು, ಟ್ರಂಪ್ರಳಯ ಒಂದು ಉದಾಹರಣೆ ಎನ್ನುತ್ತಾರೆ ಚಿನ್ನಸ್ವಾಮಿ. ಜಾಗತಿಕ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವೆನಿಸುವ ವಿಷಯಗಳನ್ನೂ ಚರ್ಚಿಸಿದ್ದಾರೆ. ಅವೆಲ್ಲವೂ ಪ್ರಬುದ್ಧತೆ ಮತ್ತು ಪ್ರಾಮಾಣಿಕತೆಯ ಮೂಸೆಯಲ್ಲಿ ಕಡೆದ ನುಡಿಗಡಣದ ರಸಾಯನವಾಗಿ ಭಟ್ಟಿ ಇಳಿದಿವೆ.
©2024 Book Brahma Private Limited.