ಹಿರಿಯ ಪತ್ರಕರ್ತ ಲೇಖಕ ವಿಶ್ವೇಶ್ವರ ಭಟ್ ಅವರ ಅಂಕಣ ಬರಹಗಳ ಕೃತಿ- ʻಸುದ್ದಿಮನೆ ಕತೆʼ. ಪತ್ರಿಕೆ, ಪತ್ರಕರ್ತರು ಹಾಗೂ ಪತ್ರಿಕೋದ್ಯಮ ಕುರಿತು ಮಾಹಿತಿ ಹೊಂದಿರುವ ಕೃತಿ. ಸಂಪಾದಕ ಚಂದನ್ ಮಿತ್ರಾ ಅವರು ಬೆನ್ನುಡಿ ಬರೆದು ‘ಸುದ್ದಿಮನೆ ಕತೆ’ಯಂಥ ಅಂಕಣ ಕನ್ನಡದಲ್ಲೊಂದೇ ಅಲ್ಲ, ಬೇರೆ ಯಾವ ಭಾಷೆಯಲ್ಲೂ ಬಂದಿಲ್ಲವೆಂದು ನನಗನಿಸಿದೆ. ಇದೊಂದು ವಿನೂತನ ಪ್ರಯೋಗ. ಪತ್ರಿಕೆ, ಪತ್ರಕರ್ತರು, ಸುದ್ದಿಸಂಗ್ರಹದ ಸವಾಲು, ಸುದ್ದಿಮನೆಯೊಳಗಿನ ಹಾಸ್ಯ ಪ್ರಸಂಗ, ಪತ್ರಕರ್ತನ ಸಾಹಸ, ಹುಚ್ಚಾಟ, ತಿಕ್ಕಲುತನ, ಶಾಣ್ಯಾತನ ಹೀಗೆ ಪತ್ರಿಕೋದ್ಯಮದ ಎಲ್ಲ ಮುಖಗಳನ್ನು ತೆರೆದಿಡುವ ಈ ಅಂಕಣ ಕೇವಲ ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಎಲ್ಲರಿಗೂ ರುಚಿಸುವಂಥದು. ಅದರಲ್ಲೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕೈ ದೀವಿಗೆ. ಪತ್ರಕರ್ತನಿಗೆ ಕೈಪಿಡಿ. ಪತ್ರಿಕಾ ವೃತ್ತಿಯನ್ನು ವಿಭಿನ್ನವಾಗಿ ನೋಡಿದ ಮೊದಲ ಪ್ರಯತ್ನವಿದುʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.
©2024 Book Brahma Private Limited.