ಅಪ್ಪ ಜಿ. ಟಿ. ನಾರಾಯಣ ರಾವ್ ಅವರನ್ನು ಅಮೆರಿಕೆಗೆ ಕರೆಸಿಕೊಳ್ಳಬೇಕೆಂಬುದು ಮಗ ಆನಂದವರ್ಧನರ ಆಶಯವಾಗಿತ್ತು. ಆದರೆ ಅಪ್ಪ ಒಂದು ಷರತ್ತು ಹಾಕಿದರು. ತಾನು ಅಮೆರಿಕೆಗೆ ಬಂದರೆ ಖ್ಯಾತ ಖಗೋಳ ವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರನ್ನು ಸಂದರ್ಶಿಸಲು ಸಹಾಯ ಮಾಡಬೇಕು ಎಂಬುದಾಗಿತ್ತು. ಮಗನಿಗೆ ಒಪ್ಪದೇ ವಿಧಿ ಇರಲಿಲ್ಲ!
ಕೃತಿ ರಚಿಸಲು ಮಾಡಿಕೊಂಡ ತಯಾರಿಯೇ ಅನನ್ಯವಾಗಿತ್ತು ಎನ್ನುತ್ತಾರೆ ಅವರ ಮತ್ತೊಬ್ಬ ಮಗ ಅತ್ರಿ ಬುಕ್ ಸೆಂಟರ್‌ನ ಜಿ.ಎನ್ ಅಶೋಕವರ್ಧನ.
"ಮೊದಲು `ಸುಬ್ರಹ್ಮಣ್ಯನ್ ಚಂದ್ರಶೇಖರ್’, ವೈಜ್ಞಾನಿಕ ಜೀವನ ಚರಿತ್ರೆಯನ್ನು ಬರೆದು ಪ್ರಕಟಿಸಿದರು. ಅದನ್ನು ಚಿಕಾಗೋದಲ್ಲಿ ಕೈಯಾರೆ ಸು. ಚಂದ್ರಶೇಖರ್ ಅವರಿಗೆ ಕೊಟ್ಟರು. ಹಾಗೇ ಅವರ ಜೀವನದರ್ಶನ ಕುರಿತಂತೆ ಅವರನ್ನು ಒಂದೂವರೆ ದಿನದ ಉದ್ದಕ್ಕೆ ಸಂದರ್ಶನ ನಡೆಸಿದರು. ಭಾರತಕ್ಕೆ ಮರಳಿದ ಮೇಲೆ ಆ ಸಂದರ್ಶನ ಮತ್ತು ಪ್ರವಾಸಕಥನ ಸೇರಿದಂತೆ ‘ಸಪ್ತಸಾಗರದಾಚೆಯೆಲ್ಲೋ’ ಎಂಬ ಇನ್ನೊಂದು ಕೃತಿಯೂ ಬಂತು" ಎಂದು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.
ಒಂದು ಕೃತಿ ರಚನೆಯ ಹಿಂದೆ ಎಷ್ಟೆಲ್ಲಾ ತಯಾರಿಗಳಿರುತ್ತವೆ ಎಂಬ ಅಂಶ ಮೈನವಿರೇಳಿಸುತ್ತದೆ. ಎಸ್. ಚಂದ್ರಶೇಖರರನ್ನು ಕನ್ನಡದಲ್ಲಿ ಅರಿಯಲು ಯತ್ನಿಸುವವರು ಈ ಕೃತಿಯನ್ನು ಮರೆಯುವಂತಿಲ್ಲ.
ಜಿ.ಟಿ.ನಾರಾಯಣ ರಾವ್ ಅವರು ಪುತ್ತೂರಿನ ಸಮೀಪದ ಮರಿಕೆ ಗ್ರಾಮದಲ್ಲಿ 30-01-1926ರಂದು ಜನಿಸಿದರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ಎಂ.ಎ. ಪದವಿ ಪಡೆದಿರುವ ಇವರು ಎನ್.ಸಿ.ಸಿ. ಅಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸಂಗೀತ ಹಾಗೂ ಕನ್ನಡ ಅಭಿಜಾತ ವಾಙ್ಙಯ ಕುರಿತು ಅಪಾರ ಆಸಕ್ತಿ ಹೊಂದಿದ್ದಾರೆ, ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪನ ಮತ್ತೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಸಿ.ವಿ. ರಾಮನ್‌ರನ್ನು ಬೆಂಗಳೂರಿನಲ್ಲಿಯೂ, ಎಸ್. ಚಂದ್ರಶೇಖರ್‌ರನ್ನು ಚಿಕಾಗೋದಲ್ಲಿಯೂ ಭೇಟಿಮಾಡಿ ವೈಜ್ಞಾನಿಕ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ವಿಪುಲ ಸ್ವತಂತ್ರ ವೈಜ್ಞಾನಿಕ ಕೃತಿಗಳನ್ನೂ, ಕೆಲವು ...
READ MORE