'ಸೌಭಾಗ್ಯ’ ನಾಡಿನ ಪ್ರಖ್ಯಾತ ಚಿತ್ರಕಲಾಕಾರ ಎ. ಎಸ್. ಪಾಟೀಲರ ಜೀವನ ಚರಿತ್ರೆ. ಇದನ್ನು ಬರೆದವರು ಮತ್ತೊಬ್ಬಕಲಾವಿದ ಶಿವಾನಂದ ಬಂಟನೂರು. ’ಸೌಭಾಗ್ಯ’ ಎ. ಎಸ್. ಪಾಟೀಲರ ಜೀವನದ ಸಂಪೂರ್ಣ ಮಾಹಿತಿಗಳನ್ನೊಳಗೊಂಡ ಕೃತಿ.
ಶುಭ್ರ, ಶಿಸ್ತಿನ, ಸರಳ, ಸಾತ್ವಿಕ, ಸ್ವಭಾವದ ಪಾಟೀಲರು ಆ ಹಿನ್ನಲೆಯಲ್ಲಿ ಸಾವಿರಾರು ಚಿತ್ರಗಳನ್ನು ರಚಿಸಿದವರು. ಪಾಟೇಲರು ರಚಿಸಿರುವ ಹಲವಾರು ಹೂಗಳ ಚಿತ್ರದ ಕುರಿತು ಲೇಖಕರು ಇಲ್ಲಿ ಅರ್ಥವತ್ತಾಗಿ ವಿಶ್ಲೇಷಿಸಿದ್ದಾರೆ.
ಬಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಖೈನೂರರಲ್ಲಿ 1967ರಲ್ಲಿ ಜನಿಸಿದ ಶಿವಾನಂದ ಬಂಟನೂರರು ಚಿತ್ರ ಕಲೆಗೆ ಸಂಬಂಧಿಸಿದಂತೆ ಎ.ಎಂ., ಜಿ.ಡಿ (ಆರ್)ಗಳಲ್ಲದೆ ಸ್ನಾತಕೋತ್ತರ ಪದವಿಯನ್ನು ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಸಂಶೋಧನಾ ಅನುದಾನ ಪಡೆದು 2002ರಲ್ಲಿ 'ಕರ್ನಾಟಕ ಜನಪದ ಶಿಲ್ಪಕಲೆ' ಕುರಿತು ಪಿಎಚ್.ಡಿ. ಪದವಿ ಪಡೆದಿದ್ದಾರೆ. ಮೂಲತ ಕಲಾವಿದರಾದ ಬಂಟನೂರ ಅವರು ಬೆಂಗಳೂರಿನ ವೆಂಕಟಪ್ಪ ಕಲಾಶಾಲೆ ಸೇರಿದಂತೆ ಹಲವಾರು ಕಡೆಗಳಲ್ಲಿ ಏಕವ್ಯಕ್ತಿ ಪ್ರದರ್ಶನವನ್ನೂ ಪೂನಾ, ಗೋವ ತಮಿಳುನಾಡು ಸೇರಿದಂತೆ ರಾಜ್ಯದ ಹಲವಾರು ಕಡೆ ಸಮೂಹ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಚಿತ್ರಕಲೆಯ ಸ್ನಾತಕೋತ್ತರ ವ್ಯಾಸಂಗದಲ್ಲಿ ಪ್ರಥಮ ...
READ MORE