ಸೀಮೋಲ್ಲಂಘನ ಭಾಗ-1

Author : ಸುಧೀಂದ್ರ ಬುಧ್ಯ

Pages 196

₹ 150.00




Year of Publication: 2019
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಶಿವಮೊಗ್ಗ

Synopsys

ಸುಧೀಂದ್ರ ಬುಧ್ಯ ಅವರ ಅಂಕಣ ಬರಹಗಳ ಸಂಕಲನ ‘ಸೀಮೋಲ್ಲಂಘನ’. ಕೃತಿಯ ಕುರಿತು ಕೆ. ಸತ್ಯ ನಾರಾಯಣ ಅವರು ‘ಸಾಮಾನ್ಯವಾಗಿ ಹೊರ ದೇಶಗಳ ಬೆಳವಣಿಗೆ ಬಗ್ಗೆ ಬರೆಯುವಾಗ ಅಂಕಣಕಾರರೆಲ್ಲ ಭಾರತೀಯ ದೃಷ್ಟಿಕೋನ, ಭಾರತದ ಹಿತಾಸಕ್ತಿಗಳ ಹಿನ್ನೆಲೆಯಲ್ಲಿ ಬರೆಯುತ್ತಾರೆ. ಸುಧೀಂದ್ರ ಈ ಸ್ವಯಂಕಲ್ಪಿತ ಒತ್ತಾಯದಿಂದ ತಪ್ಪಿಸಿಕೊಂಡಿದ್ದಾರೆ. ಸುಧೀಂದ್ರ ತಮ್ಮ ಅಂಕಣಗಳಲ್ಲಿ ‘ಅತಿ’ ನಿಲುವುಗಳನ್ನು ತಳೆಯುವುದಿಲ್ಲ. ಒಂದು ಹದದ ಸಮತೋಲನ ಮತ್ತು ಮುಕ್ತ ಸ್ವಭಾವದಿಂದಲೇ ಬರೆಯುತ್ತಾರೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಸುಧೀಂದ್ರ ಬುಧ್ಯ
(04 September 1984)

ಹುಟ್ಟಿ ಬೆಳೆದದ್ದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ. ಬೇರುಗಳಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಓದಿದ್ದು ಇಂಜಿನಿಯರಿಂಗ್. ಆಸಕ್ತಿ ಸಾಹಿತ್ಯ ಮತ್ತು ಪತ್ರಿಕೋದ್ಯಮ. ಚೆನ್ನೈ, ಬೆಂಗಳೂರು, ಅಮೆರಿಕದ ಸಿನ್ಸಿನಾಟಿ, ಚಿಕಾಗೋ ನಗರಗಳಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ವೃತ್ತಿ ನಡೆಸಿದ ಅನುಭವ. ಸೃಜನಶೀಲ ಲೇಖಕ, ಕತೆಗಾರ, ಅಂಕಣಕಾರ, ರಾಜ್ಯಮಟ್ಟದ ಹಲವು ಜನಪ್ರಿಯ ಪತ್ರಿಕೆಗಳಲ್ಲಿ ನೂರಾರು ಬರಹಗಳು ಪ್ರಕಟವಾಗಿವೆ. ‘ಹೊಸದಿಗಂತ’ ಪತ್ರಿಕೆಯಲ್ಲಿ 2011ರಿಂದ 2014ರವರೆಗೆ ‘ಪರದೇಶಿ ಪರಪಂಚ’ ಅಂಕಣ, ನರೇಂದ್ರ ಮೋದಿ ಪ್ರಧಾನಿಯಾದ ತರುವಾಯ ಕೈಗೊಂಡ ಚೊಚ್ಚಲ ಅಮೆರಿಕ ಪ್ರವಾಸ ಕುರಿತ ವರದಿ ‘ಅಂಕಲ್ ಸ್ಯಾಮ್ ಅಂಗಳದಲ್ಲಿ ಮೋದಿ ಮೋಡಿ’, ಅಮೆರಿಕ ...

READ MORE

Related Books