ಶೈಕ್ಷಣೆಕ ಲೇಖನಗಳು ಸಮಾನ್ಯ ಜನರಿಗೆ ಅರ್ಥವಾಗುವುದಿಲ್ಲ.ಮಹಾಕವಿಗಳು ಮತ್ತು ವಿದ್ವಾಂಸರ ಕಗ್ಗಗಳು ಸಾಮಾನ್ಯರಿಗೆ ದಕ್ಕುವುದಿಲ್ಲ ಹಾಗೆಂದು ಲೋಕಜ್ಞಾನದಿಂದ ಜನರು ವಂಚಿತರೇನೂ ಉಳಿದಿಲ್ಲ, ವಚನ, ಕೀರ್ತನೆ, ಜಾನಪದದ ಪರ್ಯಾಯ ಮಾರ್ಗಗಳನ್ನು ಜನ ಕಂಡುಕೊಂಡಿದ್ದಾರೆ.ಸಿನಿಮಾ ಸಾಹಿತ್ಯವನ್ನು ನೋಡಬಹುದು. ಸಿನಿಕ್ಷೇತ್ರ ಘನಗಂಭೀರ ಸಂಗತಿಗಳನ್ನು ಸರಳವಾಗಿ ಕಟ್ಟಿಕೊಟ್ಟ ಖ್ಯಾತಿ ಚಿ.ಉದಯಶಂಕರ್ ರವರಿಗೆ ಸಲ್ಲುತ್ತದೆ.ಚಿತ್ರರಸಿಕರನ್ನು ತಮ್ಮ ಸಾವಿರಾರು ಗೀತೆಗಳ ಮೂಲಕ ರಂಜಿಸಿದ, ಮಾಗಿಸಿದ ಉದಯಶಂಕರ್ ಅವರ ಬದುಕು-ಬರಹಗಳನ್ನು ಉಪನ್ಯಾಸಕ ಮತ್ತು ಅಧ್ಯಯನಕಾರರಾದ ಡಿ.ಎಸ್. ಶ್ರೀನಿವಾಸ್ ಪ್ರಸಾದ್ ಪರಿಚಯಿಸಿದ್ದಾರೆ ಈ ಕೃತಿಯಲ್ಲಿದೆ.
ಬೆಂಗಳೂರು ಮೂಲದವರಾದ ಲೇಖಕ ಡಿ.ಎಸ್. ಶ್ರೀನಿವಾಸ ಪ್ರಸಾದ್ ಅವರು ಬಾಲ್ಯದಿಂದಲೇ ಬರೆವಣಿಗೆಯಲ್ಲಿ ತೊಡಗಿಕೊಂಡವರು.ತಮ್ಮ 10ನೇ ವಯಸ್ಸಿನಲ್ಲೇ ಬೆಂಗಳೂರು ಆಕಾಶವಾಣಿಯಲ್ಲಿ ಬಾಲಕಲಾವಿದನಾಗಿ `ಒಗ್ಗಟ್ಟಿನಲ್ಲಿ ಬಲವಿದೆ', `ಸಮುದ್ರದಲ್ಲಿ ಆಹಾರ...' ಸೇರಿದಂತೆ 10 ನಾಟಕಗಳಲ್ಲಿ ಅಭಿನಯಿಸಿದ್ದರು. ಆಚಾರ್ಯ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಇವರು 3 ವರ್ಷದಲ್ಲಿ ಸುಮಾರು 155 ಅಂತರಕಾಲೇಜು ಬಹುಮಾನಗಳನ್ನು ಪಡೆದು ಪ್ರತಿಭಾವಂತ ವಿದ್ಯಾರ್ಥಿ ಪ್ರಶಸ್ತಿಗೆ ಭಾಜನರಾದರು. ಶೇಷಾದ್ರಿಪುರಂ ಕನ್ನಡ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ./ಪದವಿಯನ್ನು ವ್ಯಾಸಂಗ ಮಾಡಿದರು. ಪ್ರಸ್ತುತ ಅವರು ಕನ್ನಡ ಉಪನ್ಯಾಸಕರು. ಕೃತಿಗಳು: ಸಾಹಿತ್ಯ ಶಿಲ್ಪಿ : ಚಿ ಉದಯಶಂಕರ್ , ಸ್ವರ ರಾಗ ಸುಧಾ : ಸಿನಿಮಾ ಸಂಗೀತದ ಕ್ಲಾಸಿಕಲ್ ಟಚ್. ...
READ MORE