ಕಲಾಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಆರ್. ಎಂ. ಹಡಪದ್ ಅವರ ಬಾಲ್ಯ ಜೀವನದಿಂದ ಅವರ ಕಲಾ ಬದುಕಿನ ಎಲ್ಲಾ ಕೊಡುಗೆಗಳನ್ನು, ಅವರ ಕಾರ್ಯಕ್ಷೇತ್ರವನ್ನು ಕಲಾತ್ಮಕವಾಗಿಯೇ ಪುಸ್ತಕದ ರೂಪದಲ್ಲಿ ಚಿತ್ರಿಸಲಾಗಿದೆ. ಹಡಪದ್ ಅವರು ನವ್ಯ ಕಲಾ ಪರಂಪರೆಯ ಮೊದಲ ಸಾಲಿನ ಕಲಾವಿದರು. ಅಂತೆಯೇ ಅನೇಕ ಸಮಕಾಲೀನ ಚಿಂತನೆಯ ಕಲಾವಿದರ ಸೃಷ್ಟಿಗೆ ಕಾರಣರಾದವರು. ಅಂತಹ ಸೃಜನಶೀಲ ವ್ಯಕ್ತಿಯ, ಕಲಾ ವ್ಯಕ್ತಿತ್ವದ ಪರಿಚಯವನ್ನು ಈ ಹೊತ್ತಿಗೆ ಕಲಾತ್ಮಕವಾಗಿ ಹೊರತಂದಿದೆ.
ಸಾಹಿತಿ, ವಿಮರ್ಶಕ ಪ್ರೊ. ಎಂ. ಎಚ್. ಕೃಷ್ಣಯ್ಯ ಅವರು (ಜನನ: 21-07-1937) ಮೈಸೂರಿನಲ್ಲಿ ಜನಿಸಿದರು. ತಂದೆ ಹುಚ್ಚಯ್ಯ, ತಾಯಿ ಕೆಂಪಮ್ಮ. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ. ಎ ಮತ್ತು ಎಂ. ಎ. ಪದವೀಧರರು. ಬೆಂಗಳೂರು, ಕೋಲಾರ, ಮಂಗಳೂರು, ಮಾಗಡಿ ಮುಂತಾದೆಡೆ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ. 1979-83ರಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ನಿರ್ದೇಶನಾಲಯದ ಯುವ ಕರ್ನಾಟಕ ಹಾಗೂ ಸ್ಫೋರ್ಟ್ಸ್ ಅರೆನಾ ಪತ್ರಿಕೆಗಳಿಗೆ ಇವರನ್ನು ಸರ್ಕಾರವು ಸಂಪಾದಕರೆಂದು ನಿಯೋಜಿಸಿತ್ತು. ಲಲಿತ ಕಲಾ ಅಕಾಡೆಮಿಯ `ಕರ್ನಾಟಕ ಕಲಾವಾರ್ತೆ '(1987-92) ಗೌರವ ಸಂಪಾದಕರು ಮತ್ತು ಕಲಾ ಪಂಥ ಮಾಲೆಯ ‘ಎಕ್ಸ್ ಪ್ರೆಷನಿಸಂ’ ಹಾಗೂ ‘ಇಂಪ್ರೆಷನಿಸಂ’ ಪುಸ್ತಕಗಳಿಗೆ ...
READ MORE