ಪ್ರಸ್ತಾಪನ

Author : ದೇವೇಂದ್ರಪ್ಪ ಜೆ. (ಜಾಜಿ ದೇವೇಂದ್ರಪ್ಪ)

Pages 252

₹ 220.00




Year of Publication: 2018
Published by: ಎಸ್.ಎಲ್.ಎನ್. ಪಬ್ಲಿಕೇಷನ್ಸ್
Address: ಎಸ್.ಎಲ್.ಎನ್.ಪಬ್ಲಿಕೇಷನ್ಸ್, #3437, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರಿನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560028
Phone: 9972129376

Synopsys

ಶಾಸನ, ಹಸ್ತಪ್ರತಿ, ಹಳಗನ್ನಡ ಪಠ್ಯಗಳು, ದ್ವಿಭಾಷಾ ಪರಿಸರ, ಜಾನಪದ, ವೈಚಾರಿಕ ಸಾಹಿತ್ಯ, ಸಮುದಾಯ ಅಧ್ಯಯನ, ಚರಿತ್ರೆ ಕುರಿತು ಮಾಡಿರುವ ಆಳವಾದ ಅಧ್ಯಯನ ಇವರ ಸಂಶೋಧನಾ ಬರಹಗಳಲ್ಲಿವೆ. ಈ ಲೇಖನಗಳು ಓದುಗರಲ್ಲಿ ಅಧ್ಯಯನಶೀಲತೆ ಹಾಗೂ ಆಳವಾದ ಅರಿವಿನ ಹಸಿವನ್ನು ಹುಟ್ಟಿಸುತ್ತದೆ. ಸಂಸ್ಕೃತಿ ಚಿಂತನೆಯನ್ನು ಸೂಕ್ಷ್ಮವಾಗಿ ಅರ್ಥೈಸುವ ಮತ್ತು ತನ್ನ ತಲೆಮಾರಿನ ಹಲವರಿಗೆ ಸಾಹಿತ್ಯದ ದಾರಿ ತೋರಿಸುವಂತಿದೆ ಇವರ ಕೃತಿ ಎನ್ನುತ್ತಾರೆ ಮೈತ್ರೀಯಿಣಿ.

About the Author

ದೇವೇಂದ್ರಪ್ಪ ಜೆ. (ಜಾಜಿ ದೇವೇಂದ್ರಪ್ಪ)
(02 November 1976)

ಜಾಜಿ ದೇವೇಂದ್ರಪ್ಪ ಎಂದೇ ಖ್ಯಾತರಾಗಿರುವ ಕವಿ, ವಿಮರ್ಶಕ ಡಾ.ದೇವೇಂದ್ರಪ್ಪ ಜೆ ಅವರು ಮೂಲತಃ ಬಳ್ಳಾರಿಯವರು. ತಂದೆ ಜಾಜಿ ಚೆನ್ನಬಸಪ್ಪ, ತಾಯಿ ನೀಲಮ್ಮ. ಸದ್ಯ ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಜಾಜಿ ದೇವೇಂದ್ರಪ್ಪನವರು, ಸಾಹಿತ್ಯದ ಹಲವು ವಿಭಾಗಗಳಲ್ಲಿ ಕೃಷಿ ಮಾಡಿದ್ದಾರೆ. ಗುಲ್ಪರ್ಗ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಕನ್ನಡದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಆಂಧ್ರ- ಕರ್ನಾಟಕ ಗಡಿಭಾಗದ ಸ್ಥಳನಾಮಗಳು ಎಂಬ ವಿಷಯದಡಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ದೇವೇಂದ್ರಪ್ಪನವರು ಹಳಗನ್ನಡ, ಮಧ್ಯಕಾಲೀನ ಕನ್ನಡ, ...

READ MORE

Related Books