ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿನ ಆಯ್ದ ಅಂಕಣ ಬರಹಗಳ ಸಂಗ್ರಹವೇ ನಲಿವಿನ ಟಚ್ ಪುಸ್ತಕ. ಪ್ರತಿಯೊಂದು ಲೇಖನವೂ ಅದರ ವಸ್ತುನಿನ ಸುತ್ತ ಮಾತ್ರ ಸುತ್ತದೇ ವಿವಿಧ ಸಂಗತಿಗಳ ಸಾಧ್ಯತೆ, ಹೊಂದಿಕೆ, ಹೋಲಿಕೆಗಳಿಂದ ಸೃಜನಶೀಲವಾಗುತ್ತವೆ. ಯಾಂತ್ರಿಕ ಬದುಕಿನಲ್ಲಿ ನೈಜ ಜೀವನ ಸೌಂದರ್ಯವನ್ನೂ ಎಲ್ಲರಿಗೂ ತಿಳಿಸಬೇಕೆಂಬ ಅರ್ಥಪೂರ್ಣ ಕಾಳಜಿ ಮತ್ತು ಲಘು ಹಾಸ್ಯದ ಧಾಟಿಯಲ್ಲಿ ಓದುಗರನ್ನು ನಕ್ಕು ನಗಿಸುತ್ತಲೇ ಚಿಂತನೆಗೆ ಹಚ್ಚುವ ವಿಶಿಷ್ಟ ಕರಾಮತ್ತುಗಳು ಈ ಬರಹಗಳಲ್ಲಿ ವಿಫುಲವಾಗಿದೆ ತಾರ್ಕಿಕ ವಿಶ್ಲೇಷಣೆ, ಸಣ್ಣ ಸಣ್ಣ ಸಂಗತಿಗಲಲ್ಲೂ ಸ್ವಾರಸ್ಯವನ್ನು ಹುಡುಕುವ ಮನೋಭಾವ, ಅಕ್ಷರಗಳೊಂದಿಗೆ ಆಟವಾಡುತ್ತಾ ಪದವಿನೋದದಿಂದ ಹೊಸ ಹೊಸ ಅರ್ಥಗಳನ್ನು ಹುಟ್ಟುಹಾಕುತ್ತ ಸಾಗುವ ನವಿರಾದ ನಿರೂಪಣೆ ಇವೆಲ್ಲವೂ ಜೋಶಿಯವರ ಬರವಣಿಗೆಗೆತನ್ನದೇ ಛಾಪು ನೀಡುತ್ತದೆ. ಯಾವುದೇ ಪಕ್ಷ, ಪಂಗಡ, ಜಾತಿ, ಧರ್ಮ, ರಾಜಕೀಯದ ಬಗ್ಗೆ ಪೂರ್ವಗ್ರಹವಿಲ್ಲದೆ ಸಾಮಾನ್ಯ ವಿಷಯಗಳನ್ನೆತ್ತಿಕೊಂಡು ‘ಇದು ಹೀಗೂ ಇದೆಯೇ!’ ಎಂದು ಅಚ್ಚರಿಯಾಗುವಂತೆ ಬರೆಯುವ ಇವರ ಶೈಲಿ ಅಸಂಖ್ಯ ಓದುಗರ ಮನ ಗೆದ್ದಿದೆ. ಅಮೀಬದಿಂದ ಅನಂತದವರೆಗೂ ವಿಷಯಗಳು ಎಲ್ಲವನ್ನೂ ಒಳಗೊಂಡು ಸಾಗುತ್ತವೆ.. ವಾರದಿಂದ ವಾರಕ್ಕೆ ವಿಭಿನ್ನ ವಿಶಿಷ್ಟ ವಿಷಯಗಳನ್ನೆತ್ತಿಕೊಂಡು ಬರೆಯುವ ಜೋಶಿಯವರು ಕನ್ನಡದ ಮಟ್ಟಿಗೆ ಅಂಕಣ ಬರವಣಿಗೆಗೊಂದು ಹೊಸ ವ್ಯಾಖ್ಯೆ ಕೊಟ್ಟಿದ್ದಾರೆಂದರೆ ಉತ್ಪ್ರೇಕ್ಷೆಯಲ್ಲ.
©2024 Book Brahma Private Limited.