ಓಪನ್ ಚಾಲೆಂಜ್

Author : ಪ್ರವೀಣ್ ಕುಮಾರ್ ಮಾವಿನಕಾಡು

Pages 164

₹ 150.00




Year of Publication: 2020
Published by: ಅಯೋಧ್ಯಾ ಬುಕ್ಸ್
Address: 1571, 36ನೇ ಕ್ರಾಸ್, ಡಾ. ಪುನೀತ್ ರಾಜಕುಮಾರ್ ರೋಡ್, ಬನಶಂಕರಿ 2ನೇ ಹಂತ, ಬೆಂಗಳೂರು, ಕರ್ನಾಟಕ 560070
Phone: 096209 16996

Synopsys

ಲೇಖಕ ಪ್ರವೀಣಕುಮಾರ ಮಾವಿನಕಾಡು ಅವರು “ಹೊಸ ದಿಗಂತ” ದಿನಪತ್ರಿಕೆಯಲ್ಲಿ ಬರೆದ “ಹುಳಿಮಾವು” ಅಂಕಣದ ಆಯ್ದ ಬರಹಗಳ ಸಂಗ್ರಹ ಈ ಕೃತಿ. -ಓಪನ್ ಚಾಲೆಂಜ್. ದೀಪಾವಳಿಗೆ ಪಟಾಕಿ ಸಿಡಿಸಬೇಡಿ, ನಾಗರಪಂಚಮಿಯಲ್ಲಿ ಹಾಲೆರೆಯಬೇಡಿ ಎಂದೆಲ್ಲ ಇರುವ ತರ್ಕಳಿಗೆ ವಿರುದ್ಧವಾಗಿ ಇಲ್ಲಿಯ ವಿಚಾರಗಳು ಈ ಆಚರಣೆಗಳಿಗೆ ಸಮರ್ಥನೆ ನೀಡುವಂತಿವೆ. ಲೇಖಕರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ ಬರಹಗಳು ಈ ಕೃತಿಯಲ್ಲಿ ಒಳಗೊಂಡಿವೆ. ಲೇಖಕರ  ವಿಶಿಷ್ಟ ವ್ಯಂಗ್ಯ, ಹಾಸ್ಯಪ್ರವೃತ್ತಿಯನ್ನು ಈ ಪುಸ್ತಕದ ಉದ್ದಕ್ಕೂ ನೋಡಬಹುದು. ಸೆಕ್ಯುಲರ್‍ವಾದಿಗಳ ಸುಳ್ಳು ಸಂಕಥನಗಳನ್ನು ಒಡೆಯುವ ದಾರಿಯಲ್ಲಿ “ಓಪನ್ ಚಾಲೆಂಜ್” ಒಂದು ದೃಢ ಹೆಜ್ಜೆಯಾಗಿದೆ ಎಂಬುದು ವಿಶ್ಲೇಷಣಾಕಾರರ ಅಭಿಪ್ರಾಯ.

About the Author

ಪ್ರವೀಣ್ ಕುಮಾರ್ ಮಾವಿನಕಾಡು

ಪ್ರವೀಣ್ ಕುಮಾರ್ ಮಾವಿನಕಾಡು ಪ್ರಸ್ತುತ ಸೌರಶಕ್ತಿ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದು, ಸನ್ ಪ್ರೀತ್ ಸೋಲಾರ್ ಸಿಸ್ಟಮ್ಸ್ ಎನ್ನುವ ಸ್ಟಾರ್ಟಪ್ ಒಂದರ ಸಂಸ್ಥಾಪಕ ನಿರ್ದೇಶಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ಆರೇಳು ವರ್ಷಗಳಿಂದ ಸಾಮಾಜಿಕ ಜಾಲತಾಣ ಫೇಸ್ ಬುಕ್ ಮುಖಾಂತರ ಪ್ರಸ್ತುತ ವಿದ್ಯಮಾನಗಳ ಕುರಿತು ನಿರಂತರವಾಗಿ ಬರಹಗಳನ್ನು ಪ್ರಕಟಿಸುತ್ತಾ ಬಂದಿದ್ದು, ಹೊಸದಿಗಂತ ದಿನಪತ್ರಿಕೆಯಲ್ಲಿ ಹುಳಿಮಾವು ಎನ್ನುವ ಹೆಸರಿನಲ್ಲಿ ಎರಡೂವರೆ ವರ್ಷ ವಾರದ ಅಂಕಣ ಪ್ರಕಟವಾಗಿದೆ. ಕಳೆದ ವರ್ಷ ಅಯೋಧ್ಯಾ ಪ್ರಕಾಶನ ಅದೇ ಅಂಕಣದ ಆಯ್ದ ಲೇಖನಗಳನ್ನೊಳಗೊಂಡ ಓಪನ್ ಚಾಲೆಂಜ್ ಎನ್ನುವ ಪುಸ್ತಕವನ್ನು ಪ್ರಕಟಿಸಿದೆ. ಅವರ ಲೇಖನಗಳು ವಿಕ್ರಮ, ...

READ MORE

Related Books