‘ಒಡಲು ದನಿ’ಯ ಬರೆಹಗಳಲ್ಲಿ ಪ್ರತಿ ಜೀವಿಯ ಅನುಭವ, ಅಹ್ಲಾದ, ಆರ್ತನಾದ ಎಲ್ಲವೂ ಇಲ್ಲಿದೆ. ಸ್ಥಳೀಯ ಪತ್ರಿಕೆಯೊಂದಕ್ಕೆ ಬರೆದ ಅಂಕಣ ಬರಹಗಳಾಗಿವೆ. ‘ಅಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ’ ಎಂಬ ಅಂಕಣದಲ್ಲಿ ಬಾಡಿಗೆ ಮನೆಯಲ್ಲಿ ಬಹುಕಾಲ ಬದುಕಿದ ಒಬ್ಬ ವ್ಯಕ್ತಿ ಸ್ವಂತ ಮನೆ ಕಟ್ಟಿಸುವ ಕಷ್ಟ, ಕಟ್ಟಿದ ತರುವಾಯ ಅವನ ಸ್ಥಿತಿ ಎಲ್ಲವೂ ಇಲ್ಲಿ ಕಾಣುತ್ತದೆ. ‘ಆತ್ಮಬಂಧು’ ಎಂಬ ಅಂಕಣ ಪತ್ರಮಾದರಿಯದ್ದು. ಈ ಸಂಕಲನದಲ್ಲಿ ಮೂರ್ನಾಲ್ಕು ಅಂಕಣಗಳು ಈ ರೀತಿಯದ್ದಾಗಿದ್ದು ‘ನಾನು ಮೋಸದ ಹುಡುಗಿಯಲ್ಲ’ ಎಂಬ ಅಂಕಣ ಪ್ರೇಮಪತ್ರದ ಮಾದರಿಯಲ್ಲಿ ಸಾಗುತ್ತದೆ. ತಾಯಿಯ ಅಗಲುವಿಕೆಯನ್ನು ಹೇಳುವ ಅಂಕಣವೊಂದರಲ್ಲಿ ಅವರ ವೈಯಕ್ತಿಕ ಬದುಕು, ಅವರ ಮನೋಧರ್ಮಗಳು ಎದ್ದುಕಾಣುತ್ತವೆ. ಮುಂದುವರಿರುದು ಅವರು ವಿಭಿನ್ನ ವಿಷಯಗಳನ್ನು ಅಂಕಣದ ಕಸೂತಿಗೊಳಪಡಿಸುತ್ತ ಆತ್ಮರತಿಯ ಅಪಾಯದಿಂದಲೂ ಎಚ್ವರವಹಿಸುತ್ತಾರೆ. ಬೆಂಕಿಯಲ್ಲಿ ಅರಳಿದ ಹೂವು ಅಂಕಣದ ಮೂಲಕ ಓದುಗರಿಗೆ ಹತ್ತಿರವಾಗುತ್ತಾರೆ.
©2024 Book Brahma Private Limited.