‘ನವೋದಯ ಕಾಲದ ಮೇಲೆ ಜಾನಪದದ ಪ್ರಭಾವ’ ಕೃತಿಯು ಪ್ರಕಾಶ ಗ. ಖಾಡೆ ಅವರ ಸಂಶೋಧನಾ ಕೃತಿಯಾಗಿದೆ. ನವೋದಯ ಸಾಹಿತ್ಯ ವಸಾಹತುಶಾಹಿಯ ಒತ್ತಡ ಅಥವಾ ಪ್ರಭಾವದಿಂದ ಮಾತ್ರ ಹುಟ್ಟಿದ್ದಲ್ಲ. ಜಾನಪದದ ಪ್ರಭಾವ ಅದರ ಮೇಲೆ ಅತ್ಯಧಿಕವಾಗಿದೆ ಎಂಬುದನ್ನು ಖಾಡೆ ಅವರು ಇಲ್ಲಿ ಸಂಶೋಧಿಸಿ ಸಿದ್ದಪಡಿಸಿದ್ದಾರೆ. ಧಾರವಾಡದ ಗೆಳೆಯರ ಗುಂಪು ಹಲಸಂಗಿ ಗೆಳೆಯರ ಗುಂಪು ಮಂಗಳೂರಿನ ಮಿತ್ರ ಮಂಡಳಿಯ ಸಾಧನೆಗಳನ್ನು ಪರಿಚಯಿಸುವ ಮೂಲಕ ಮೈಸೂರು ಕರ್ನಾಟಕ ಸಾಹಿತ್ಯ ಪರಂಪರೆಯ ಸುತ್ತ ನಡೆದ ಚರ್ಚೆಗಳಷ್ಟೇ ಸತ್ಯ ಅಲ್ಲ ಎಂಬುದನ್ನು ಅವರು ಇಲ್ಲಿ ನಿರೂಪಸಿದ್ದಾರೆ. ಜನಪದ ಸಾಹಿತ್ಯದ ಪ್ರೇರಣೆ, ಪ್ರಭಾವಗಳೇ ಹೆಚ್ಚಾಗಿವೆ ಎಂಬ ಅಂಶ ನವೋದಯ ಸಾಹಿತ್ಯದ ಮೇಲೆ ಆಸಕ್ತಿ ಹುಟ್ಟಿಸುವುದಕ್ಕೆ ಈ ಕೃತಿ ಕಾರಣವಾಗುತ್ತದೆ. ಪಿ.ಎಚ್.ಡಿ ಕೃತಿಗಳಿಗಿರುವ ಮಿತಿಗಳನ್ನು ಈ ಕೃತಿ ಮೀರಿಸಿಕೊಂಡು ಓದಿಸಿಕೊಳ್ಳುತ್ತದೆ.
©2024 Book Brahma Private Limited.