ಲೇಖಕ ಮಳಲಿ ವಸಂತಕುಮಾರ ಅವರು ಬರೆದ ಕೃತಿ-ನಾಡಗೌಡ ಕೆಂಪೇಗೌಡ. ಬೆಂಗಳೂರನ್ನು ಕಟ್ಟಿದ ಖ್ಯಾತಿಯ ಕೆಂಪೇಗೌಡ ಅವರ ಸಾಹಸಮಯವಾದ ಬದುಕು ಹಾಗೂ ಆಡಳಿತ ವೈಖರಿಯನ್ನುಕಟ್ಟಿಕೊಡುವ ಕೃತಿ ಇದು. ಕೆಂಪೇಗೌಡನ ಆಡಳಿತ ವ್ಯಾಪ್ತಿ, ಮಾಡಿದ ಯುದ್ಧಗಳು ಸಹ ಇಲ್ಲಿ ಪ್ರಸ್ತಾಪಿತ ಅಂಶಗಳು.
ಜಾನಪದ ವಿದ್ವಾಂಸ ಡಾ. ಮಳಲಿ ವಸಂತಕುಮಾರ್ ಮೂಲತಃ ಹಾಸನದವರು. ಅವರು ಜನಿಸಿದ್ದು 1945ರ ಆಗಸ್ಟ್ 6ರಂದು. ತಂದೆ ಚಿಕ್ಕೇಗೌಡ ಹಾಗೂ ತಾಯಿ ದೇವಮ್ಮ. ಹುಟ್ಟೂರು ಮಳಲಿಯಲ್ಲಿಯೇ ಪ್ರೌಢಶಾಲಾ ಶಿಕ್ಷಣ ಪಡೆದ ಇವರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಹಾಗೂ ಮಂಗಳೂರಿನ ಸ್ನಾತಕೋತ್ತರ ಕೇಂದ್ರದಿಂದ ಎಂ.ಎ ಪದವೀಧರರು. ಕುವೆಂಪು ಅವರ ನಾಟಕಗಳು ವಿಷಯದ ಮೇಲೆ ಪಿಎಚ್ಡಿ ಪಡೆದರು. ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದು, ಜನಪದ ಸಾಹಿತ್ಯ ಹಾಗೂ ಜಾನಪದ ಶಾಸ್ತ್ರೀಯ ಅಧ್ಯಯನದಲ್ಲಿ ತೊಡಗಿಸಿಕೊಂಡರು. ಮಳಲಿ ಗಿಡ್ಡಮ್ಮ, ಹೃದರ ಗಂಗೆ, ಕರಾವು, ಕಡಲ ಕವಿತೆಗಳು, ಕಾಡು, ಕದಂಬ, ವಿವಕ್ಷೆ, ಕವಿಗಳು ಕಂಡಂತೆ ಕುವೆಂಪು, ಕುವೆಂಪು ಣಾಟಕ ಸಮೀಕ್ಷೆ, ಚಿತ್ರಂಗದ ಸಮೀಕ್ಷೆ, ...
READ MORE